ಕರಾವಳಿ

ಈ ಲೇಪನವನ್ನು ಕಲೆ ಮತ್ತು ಗಾಯದ ಗುರುತುಗಳಿರುವಲ್ಲಿ ಹಚ್ಚಿದರೆ ಕಲೆಗಳು ಮಾಯಾ

Pinterest LinkedIn Tumblr

ನಮ್ಮೆಲ್ಲರ ಮೈ ಮೇಲೆ ಒಂದಲ್ಲ ಒಂದು ಗಾಯದ ಕಲೆಗಳು ಇದ್ದೇ ಇರುತ್ತೇವೆ. ಚಿಕ್ಕವರಿರುವಾಗ ಬಿದ್ದು ಮಾಡಿಕೊಂಡ ಗಾಯ ಗುಣವಾಗಿದ್ದರೂ ಅದರ ಕಲೆಗಳು ಶಾಶ್ವತವಾಗಿ ಉಳಿದು ಹಳೆಯ ನೆನಪುಗಳನ್ನು ಪುನಾರವರ್ತಿಸುತ್ತಿರುತ್ತವೆ.

ಸುಟ್ಟ ಗಾಯ, ಚಿಕ್ಕ ಪುಟ್ಟ ಶಸ್ತ್ರಚಿಕಿತ್ಸೆ, ಮೊಡವೆ ಗಾಯಗಳೂ ಶಾಶ್ವತವಾಗಿ ಉಳಿದು ಬಿಡಬಹುದು. ಈ ಕಲೆಗಳು ಬಟ್ಟೆ ಮುಚ್ಚುವ ಜಾಗದಲ್ಲಿದ್ದರೆ ಪರವಾಗಿಲ್ಲ. ಆದರೆ ಹೊರಗೆ ಕಾಣುವಂತಹ ಭಾಗ ಅಥವಾ ಮುಖದ ಮೇಲೆ ಇದ್ದರೆ, ಮುಜುಗರ ಉಂಟಾಗುತ್ತದೆ ಅಥವಾ ಬೇರೆಯವರು ಆ ಗಾಯದ ಮೂಲಕ ನಮ್ಮನ್ನು ಗುರುತಿಸುವುದು ಕೀಳರಿಮೆಯನ್ನೂ ತರಿಸುತ್ತದೆ.

ಈ ಕಲೆಗಳನ್ನು ಹೋಗಲಾಡಿಸಲು ವ್ಯಾಪಾರಿ ಸಂಸ್ಥೆಗಳು ಬಣ್ಣಬಣ್ಣದ ಜಾಹೀರಾತುಗಳನ್ನು ಕೊಡುತ್ತಿರುತ್ತವೆ. ಆದರೆ ಅದರ ಬೆಲೆ ಕೇಳಿದರೆ ಅಯ್ಯೋ ಬೇಡ! ಅದಕ್ಕಿಂತ ಈ ಕಲೆಗಳೇ ವಾಸಿ ಅಂದುಕೊಳ್ಳುತ್ತೇವೆ. ಅವುಗಳನ್ನು ಖರೀದಿಸಿದರೂ ಗುಣವಾಗುವ ಭರವಸೆಗಳಿಲ್ಲ. ಹಾಗಾದರೆ ತುಂಬಾ ಸುಲಭವಾಗಿ ನೈಸರ್ಗಿಕವಾಗಿ ಸಿಗುವ ವಸ್ತುಗಳನ್ನು ಬಳಸಿಕೊಂಡು ಗಾಯದ ಕಲೆಗಳನ್ನು ಹೋಗಲಾಡಿಸಲು ಒಂದು ಪರಿಣಾಮಕಾರಿಯಾದ ಮನೆಮದ್ದು ಇಲ್ಲಿದೆ.

ಬೇಕಾಗುವ ಸಾಮಾಗ್ರಿಗಳು:
ಅಪ್ಪಟ ಗಂಧದ ಪುಡಿ – 1 ದೊಡ್ಡ ಚಮಚ (ಗಂಧದ ಕೊರಡನ್ನು ತೇದಿ ತೆಗೆದ ಲೇಪನ ಉತ್ತಮ)
ಟೀ ಟ್ರೀ ಎಣ್ಣೆ – 2 ಚಮಚ (ಚಹಾ ಮರದ ಎಣ್ಣೆ)
ನಿಂಬೆ ರಸ – 2 ಚಿಕ್ಕ ಚಮಚ

ಈ ಮೂರನ್ನು ಒಂದು ಬೋಗುಣಿಯಲ್ಲಿ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ನಂತರ ಈ ಲೇಪನವನ್ನು ಕಲೆ ಮತ್ತು ಗಾಯದ ಗುರುತುಗಳಿರುವ ಭಾಗದ ಮೇಲೆ ಚೆನ್ನಾಗಿ ಹಚ್ಚಿ ನಯವಾಗಿ ಮಸಾಜ್ ಮಾಡಿ.

ಕೊಂಚ ಒಣಗಿದ ಬಳಿಕ ಇನ್ನೊಂದು ಪದರ ತೆಳುವಾಗಿ ಹಚ್ಚಿ ಸುಮಾರು 15 ನಿಮಿಷ ಒಣಗಲು ಬಿಡಿ. ಬಳಿಕ ಸೌಮ್ಯ ಸೋಪು ಮತ್ತು ತಣ್ಣೀರಿನಿಂದ ತೊಳೆಯಿರಿ. ಉತ್ತಮ ಪರಿಣಾಮಕ್ಕಾಗಿ ದಿನ ಬಿಟ್ಟು ದಿನ ಹಚ್ಚುತ್ತಿರಬೇಕು. ಇದು ಪರಿಣಾಮ ಬೀರಲು ತಿಂಗಳುಗಳೇ ಬೇಕಾಗಿರುವುದರಿಂದ ತಾಳ್ಮೆ ವಹಿಸುವುದು ಅತ್ಯಗತ್ಯ.

ಶ್ರೀಗಂಧದಲ್ಲಿ ಹೊರ ಚರ್ಮದ ಸುತ್ತ ಸತ್ತಿರುವ ಜೀವಕೋಶಗಳನ್ನು ನಿವಾರಿಸುವ ಗುಣವಿದೆ. ಅಲ್ಲದೆ ಇದರೊಂದಿಗೆ ನಿಂಬೆರಸ ಮತ್ತು ಟೀ ಟ್ರೀ ಆಯಿಲ್ ಸೇರಿಸುವುದರಿಂದ ಹೊಸದಾಗಿ ಬೆಳೆಯುವ ಜೀವಕೋಶಗಳು ಅಡ್ಡಾದಿಡ್ಡಿಯಾಗಿರದೇ ಸರಿಯಾದ ಕ್ರಮದಲ್ಲಿ ಬೆಳೆಯುವುದು ಹಾಗೂ ಕಲೆಗಳು ಮಾಯವಾಗುವುದು.

Comments are closed.