ಕ್ರೀಡೆ

ವಿವಿಧ ಕ್ರೀಡೆಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ‘ನಿಮ್ಮಿಷ್ಟದ ಕ್ರೀಡೆಗಳನ್ನೇ ಆಡಿ’ ಚಾಲೆಂಜ್ ಅನ್ನು ಆರಂಭಿಸಿದ ಸಚಿನ್

Pinterest LinkedIn Tumblr

ಮುಂಬೈ: ಕೇಂದ್ರ ಸಚಿವ ರಾಜ್ಯವರ್ಧನ್ ಸಿಂಗ್ ಆರಂಭಿಸಿದ್ದ ಫಿಟ್ನೆಸ್ ಚಾಲೆಂಜ್ ಗೆ ಪ್ರತಿಯಾಗಿ ಇದೀಗ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ #ನಿಮ್ಮಿಷ್ಟದ_ಕ್ರೀಡೆ_ಆಡಿ ಎಂಬ ಚಾಲೆಂಜ್ ಅನ್ನು ಆರಂಭಿಸಿದ್ದಾರೆ.

ಈ ಕುರಿತಂತೆ ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ವಿಡಿಯೋವಂದನ್ನು ಅಪ್ಲೋಡ್ ಮಾಡಿರುವ ಸಚಿನ್, ಭಾರತದ ವಿವಿಧ ಕ್ರೀಡೆಗಳನ್ನು ಪ್ರೋತ್ಸಾಹ ನೀಡುವ ಸಲುವಾಗಿ ಈ ಹೊಸ ಚಾಲೆಂಜ್ ಅನ್ನು ಆರಂಭಿದ್ಜಾರೆ. ಇದರಂತೆ ಖ್ಯಾತನಾಮರು ತಮಗೆ ಇಷ್ಟವಾದ ಕ್ರೀಡೆಯನ್ನು ಆಡಿ ಅದರ ವಿಡಿಯೋವನ್ನು ಅಪ್ಲೋಡ್ ಮಾಡಬೇಕಿದೆ. ಆ ಮೂಲಕ ತಮ್ಮ ಇಷ್ಟದ ಕ್ರೀಡೆಯ ಕುರಿತು ಮಾಹಿತಿ ನೀಡುವುದು ಈ ಹೊಸ ಚಾಲೆಂಜ್ ನ ಉದ್ದೇಶವಾಗಿದೆ ಎನ್ನಲಾಗಿದೆ.

ಈ ಚಾಲೆಂಜ್ ಗಾಗಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ಭಾರತದ ಫುಟ್ಬಾಲ್ ಆಟಗಾರ ಸಂದೇಶ್ ಜಿಂಗಾನ್, ಹಾಕಿ ಆಟಗಾರ ಸರ್ದಾರ್ ಸಿಂಗ್, ಭಾರತೀಯ ಮಹಿಳಾ ಕ್ರಿಕೆಟ್ ದಂತಕಥೆ ಮಿಥಾಲಿ ರಾಜ್, ಬ್ಡಾಡ್ಮಿಂಟನ್ ತಾರೆಯರಾದ ಕಿಡಾಂಬಿ ಶ್ರೀಕಾಂತ್, ಪಿವಿ ಸಿಂಧು ಅವರಿಗೆ ಈ ಚಾಲೆಂಜ್ ನೀಡಿದ್ದಾರೆ.

ಈ ಹಿಂದೆ ಕೇಂದ್ರ ಸಚಿವ ರಾಜ್ಯವರ್ಧನ್ ಸಿಂಗ್ ರಾಥೋಡ್ ಫಿಟ್ನೆಸ್ ಚಾಲೆಂಜ್ ಆರಂಭಿಸಿದ್ದರು. ಈ ಚಾಲೆಂಜ್ ವ್ಯಾಪಕ ವೈರಲ್ ಆಗಿ ಪ್ರಧಾನಿ ಮೋದಿ ಕೂಡ ಈ ಚಾಲೆಂಜ್ ಒಪ್ಪಿಕೊಂಡು ತಮ್ಮ ಯೋಗ ವಿಡಿಯೋ ಮಾಡಿ ಅಪ್ಲೋಡ್ ಮಾಡಿದ್ದರು. ಇದಲ್ಲದೆ ಕ್ರಿಕೆಟಿಗ ವಿರಾಟ್ ಕೊಹ್ಲಿ, ಅನುಷ್ಕಾ ಶರ್ಮಾ, ಕನ್ನಡದ ನಟರಾದ ರಕ್ಷಿತ್ ಶೆಟ್ಟಿ, ರಶ್ಮಿಕಾ ಮಂದಣ್ಣ, ನಟ ಉಪೇಂದ್ರ, ಸುದೀಪ್, ನಟ ಯಶ್ ಸೇರಿದಂತೆ ಹಲವು ಖ್ಯಾತನಾಮ ನಟರು ಈ ಚಾಲೆಂಜ್ ಸ್ವೀಕರಿಸಿದ್ದರು.

Comments are closed.