ಮನೋರಂಜನೆ

ಲಿವಿಂಗ್​ ಟುಗೆದರ್​ನಲ್ಲಿದ್ದ ಪ್ರೇಯಸಿ ಮೇಲೆ ಹಲ್ಲೆ: ಬಾಲಿವುಡ್​ ನಟ ಅರ್ಮಾನ್​ ಬಂಧನ!

Pinterest LinkedIn Tumblr


ನವದೆಹಲಿ: ಬಾಲಿವುಡ್​ ನಟ ಅರ್ಮಾನ್​ ಕೊಹ್ಲಿ ತಮ್ಮ ಪ್ರೇಯಸಿ ಮೇಲೆ ದೈಹಿಕ ಹಲ್ಲೆ ನಡೆಸಿದ ಆರೋಪದ ಮೇಲೆ ಪೊಲೀಸರಿಂದ ಬಂಧಿತರಾಗಿದ್ದಾರೆ.

ಅರ್ಮಾನ್​ ಕೊಹ್ಲಿ ತಮ್ಮ ಪ್ರೇಯಸಿ ನೀರು ರಾಂಧವ ಜತೆ ಲಿವಿಂಗ್​ ಟುಗೆದರ್​ನಲ್ಲಿದ್ದರು. ಇವರಿಬ್ಬರ ನಡುವೆ ಹಣಕಾಸಿನ ವಿಚಾರಕ್ಕೆ ಸಂಬಂಧಪಟ್ಟಂತೆ ಜೂನ್​ 3ರಂದು ಜಗಳ ಆಗಿತ್ತು. ಈ ವೇಳೆ ಅರ್ಮಾನ್​ ನೀರು ಅವರನ್ನು ತಳ್ಳಿದ ರಭಸಕ್ಕೆ ಆಕೆ ಮೆಟ್ಟಿಲುಗಳ ಮೇಲಿಂದ ಕೆಳಗೆ ಬಿದ್ದು ಗಾಯಗೊಂಡಿದ್ದರು ಎನ್ನಲಾಗಿದೆ. ಅಲ್ಲದೆ ಅರ್ಮಾನ್​ ಕೊಹ್ಲಿ ತಮ್ಮ ಕೂದಲನ್ನು ಹಿಡಿದು ಎಳೆದಾಡಿದ್ದಲ್ಲದೆ ನೆಲಕ್ಕೆ ತಲೆಯಿಂದ ಬಡಿದಿದ್ದಾರೆ ಎಂದು ನೀರು ಆರೋಪಿಸಿದ್ದಾರೆ.

ತಲೆಗೆ ಗಾಯವಾಗಿದ್ದು 15 ಹೊಲಿಗೆ ಹಾಕಲಾಗಿದೆ. ತುಂಬ ಆಳವಾದ ಗಾಯಗಳಾಗಿದ್ದು ಅದು ಶಸ್ತ್ರಚಿಕಿತ್ಸೆ ನಂತರವೂ ಉಳಿಯುತ್ತದೆ ಎಂದು ಸರ್ಜನ್​ ತಿಳಿಸಿದ್ದಾರೆ ಎಂದು ನೀರು ಆಸ್ಪತ್ರೆಯಿಂದ ಡಿಸ್​ಚಾರ್ಜ್​ ಆದ ಬಳಿಕ ತಿಳಿಸಿದ್ದರು.
ಅರ್ಮಾನ್​ ಕೊಹ್ಲಿ ಎಂಥವರು ಎಂದು ಎಲ್ಲರಿಗೂ ಗೊತ್ತು. ಸಾರ್ವಜನಿಕರೆದುರು ಹೋಗಬಾರದು ಎಂದು ಬೆದರಿಕೆ ಹಾಕಿದ್ದರು. ಈಗ ನಾನು ಯಾವುದಕ್ಕೂ ಹೆದರುವುದಿಲ್ಲ ಎಂದು ಹೇಳಿದ್ದಾರೆ.

ಅರ್ಮಾನ್​ ಮತ್ತು ನೀರು 2015ರಿಂದ ಲಿವಿಂಗ್​ ಟುಗೆದರ್​ ರಿಲೇಶನ್​ಶಿಪ್​ನಲ್ಲಿದ್ದರು. ಜಗಳದ ನಂತರ ತಮ್ಮ ಮೇಲೆ ಅರ್ಮಾನ್​ ಹಲ್ಲೆ ನಡೆಸಿದ್ದಾಗಿ ನೀರು ನೀಡಿದ್ದ ದೂರಿನ ಮೇರೆಗೆ ಪೊಲೀಸರು ಅವರನ್ನು ಬಂಧಿಸಿದ್ದಾರೆ.

Comments are closed.