ಕರಾವಳಿ

ಕುಕ್ಕೆ ಸುಬ್ರಹ್ಮಣ್ಯ ದೇಗುಲದ ಹೊರಗೆ ಪೂಜೆ ಮಾಡಿದರೆ ಅದು ದೇವರನ್ನು ತಲುಪುವುದಿಲ್ಲ : ಮಧ್ಯವರ್ತಿಗಳ ಹಾವಳಿ ತಪ್ಪಿಸಲು ಆಡಳಿತ ಮಂಡಳಿಯಿಂದ ಮಹತ್ವದ ಪ್ರಕಟಣೆ

Pinterest LinkedIn Tumblr

ಮಂಗಳೂರು, ಜೂನ್.13: ‘ದೇವಾಲಯದ ಹೊರಗೆ ಮಾಡುವ ಪೂಜೆ ದೇವರನ್ನು ತಲುಪದಿರಬಹುದು’ ಎಂಬ ಮಹತ್ವದ ಪ್ರಕಟಣೆಯೊಂದನ್ನು ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೆ ಸುಬ್ರಹ್ಮಣ್ಯ ದೇವಾಲಯದ ಆಡಳಿತ ಮಂಡಳಿ ಹೊರಡಿಸಿದೆ. ಮಧ್ಯವರ್ತಿಗಳ ಹಾವಳಿಯನ್ನು ತಪ್ಪಿಸುವ ಸಲುವಾಗಿ ಈ ಮಹತ್ವದ ಪ್ರಕಟಣೆಯನ್ನು ಹೊರಡಿಸಿರುವುದಾಗಿ ಅದು ಹೇಳಿದೆ.

ಕುಕ್ಕೆ ದೇವಾಲಯಕ್ಕೆ ಪ್ರತಿದಿನ ಸಹಸ್ರಾರು ಸಂಖ್ಯೆಯಲ್ಲಿ ಜನರು ಬರುತ್ತಾರೆ. ಆದರೆ ಜನಜಂಗುಳಿ, ಸರತಿ ಸಾಲಿನಲ್ಲಿ ನಿಲ್ಲಬೇಕಾದ ಕಷ್ಟ, ವಿಳಂಬವಾಗಿವ ಸಾಧ್ಯತೆಗಳಿಂದಾಗಿ ಹಲವರು ದೇವಾಲಯದೊಳಗೆ ಪೂಜೆ ಸಲ್ಲಿಸದೆ, ಮಧ್ಯವರ್ತಿಗಳ ಮಾತಿಗೆ ಮರುಳಾಗಿ ದೇವಾಲಯದ ಹೊರಗೆ ಪೂಜೆ ಮಾಡಿಸುತ್ತಿದ್ದಾರೆ.

ನದಿ ದಂಡೆಯ ಮೇಲೆ ಅಥವಾ ದೇವಾಲಯದ ಹೊರಗಿನ ಆವರಣದಲ್ಲಿ ಭಕ್ತರನ್ನು ಕರೆಸಿಕೊಂಡು, ’ದೇವಾಲಯದಲ್ಲಿ ಬಹಳ ರಶ್ ಇರುತ್ತದೆ ದಿನಗಟ್ಟಲೆ ಕಾಯಬೇಕು. ನಾವೂ ಈ ದೇವಾಲಯದವರೇ. ನಾವೇ ಪೂಜೆ ಮಾಡಿಸಿಕೊಡುತ್ತೇವೆ’ ಎಂದು ಮಧ್ಯವರ್ತಿಗಳು ಒತ್ತಾಯಿಸಿ, ಭಕ್ತರು ದೇವಾಲಯದಲ್ಲಿ ಪೂಜೆ ಮಾಡಿಸದಂತೆ ಮಾಡುತ್ತಿದ್ದಾರೆ. ಇದರಿಂದ ದೇವಾಲಯದ ಹೆಸರಿಗೂ ಮಸಿಬಳಿದಂತಾಗುತ್ತದೆ ಎಂದು ಕಳವಳ ವ್ಯಕ್ತಪಡಿಸಿದ ಆಡಳಿತ ಮಂಡಳಿ ಈ ಪ್ರಕಟಣೆ ಹೊರಡಿಸಿದೆ.

ಕರ್ನಾಟಕದ ಮುಜರಾಯಿ ಇಲಾಖೆಯಡಿಯಲ್ಲಿ ಬರುವ ಶ್ರೀಮಂತ ದೇವಾಲಯಗಳಲ್ಲಿ ಒಂದಾದ ಕುಕ್ಕೆಗೆ ಪ್ರತಿದಿನ ಕನಿಷ್ಟ 10,0000 ಭಕ್ತರು ಭೇಟಿ ನೀಡುತ್ತಾರೆ.

Comments are closed.