ಅಂತರಾಷ್ಟ್ರೀಯ

ಮದುವೆಗೆ ವಧುವನ್ನು ಕರೆದುಕೊಂಡು ಬರುತ್ತಿದ್ದ ಹೆಲಿಕಾಪ್ಟರ್ ಪತನ ! ಪವಾಡ ಸದೃಶ್ಯ ಪಾರಾದ ವಧು …ಇಲ್ಲಿದೆ ವೀಡಿಯೊ…

Pinterest LinkedIn Tumblr

ಬ್ರೆಜಿಲ್’ನಲ್ಲಿ ಮದುವೆ ಸಮಾರಂಭದಲ್ಲಿ ಪಾಲ್ಗೊಳ್ಳಲು ವಧುವೊಬ್ಬಳನ್ನು ಕರೆದುಕೊಂಡು ಬರುತ್ತಿದ್ದ ಹೆಲಿಕಾಪ್ಟರ್ ಕೆಳಗೆ ಇಳಿಯುತ್ತಿದ್ದಂತೆ ಪತನಗೊಂಡ ಘಟನೆ ನಡೆದಿದ್ದು, ಈ ವೀಡಿಯೊ ಈಗ ವೈರಲ್ ಆಗಿದೆ.

ಬ್ರೆಜಿಲ್’ನ ಸಾವೋ ಪಾಲೊ ಎಂಬ ಪ್ರದೇಶದಲ್ಲಿನ ದ್ರಾಕ್ಷಿತೋಟದಲ್ಲಿ ಮದುವೆ ಸಮಾರಂಭವನ್ನು ಆಯೋಜಿಸಲಾಗಿತ್ತು. ಮದುವೆಗೆ ವಧುವನ್ನು ಹೆಲಿಕಾಪ್ಟರ್’ನಲ್ಲಿ ಕರೆದುಕೊಂಡು ಬರುವ ವೇಳೆ ಹೆಲಿಕಾಪ್ಟರ್ ದ್ರಾಕ್ಷಿತೋಟದಲ್ಲಿ ಇಳಿಯುತ್ತಿದ್ದಂತೆ ಪತನಗೊಂಡಿತು. ಈ ವೇಳೆ ಹೆಲಿಕಾಪ್ಟರ್’ನಲ್ಲಿ ವಧು, ಪೈಲಟ್ ಸೇರಿದಂತೆ ಒಟ್ಟು ನಾಲ್ಕು ಮಂದಿ ಇದ್ದರು. ಪತನಗೊಂಡ ಕೆಲವೇ ಸೆಕುಂಡುಗಳಲ್ಲಿ ಹೆಲಿಕಾಪ್ಟರ್’ಗೆ ಬೆಂಕಿ ಹತ್ತಿಕೊಂಡು ಧಗಧಗನೆ ಉರಿಯಿತು. ಈ ವೇಳೆ ವಧು, ಪೈಲಟ್ ಸೇರಿದಂತೆ ಒಟ್ಟು ನಾಲ್ಕು ಮಂದಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅನಂತರ ವಧು ಮದುವೆಯಲ್ಲಿ ಪಾಲ್ಗೊಂಡಳು.

Comments are closed.