ಮನೋರಂಜನೆ

43ನೆ ವಸಂತಕ್ಕೆ ಕಾಲಿರಿಸಿದ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ: ಪತಿ ರಾಜ್ ಕುಂದ್ರಾ ಹೇಳಿದ್ದೇನು?

Pinterest LinkedIn Tumblr


ವಯಸ್ಸು ನಲವತ್ತಾದರೂ ಇನ್ನೂ ಮಾಸದ ಸೌಂದರ್ಯ. ಒಂದು ಮಗುವಿನ ತಾಯಿಯಾದರೂ ಶಿಲ್ಪದಂತೆ ಹೊಳೆಯುವ ಅವರ ಅಭಿಮಾನಿಗಳಲ್ಲಿ ಎಳ್ಳಷ್ಟು ಕ್ರೇಜ್ ಕಡಿಮೆಯಾಗಿಲ್ಲ. ಆಕೆ ಬೇರಾರು ಅಲ್ಲ ಬಾಲಿವುಡ್ ಬ್ಯೂಟಿ ಶಿಲ್ಪಾ ಶೆಟ್ಟಿ.

ಶುಕ್ರವಾರ (ಜೂ.7) ಶಿಲ್ಪಾ ಶೆಟ್ಟಿ 43ನೇ ವರ್ಷಕ್ಕೆ ಅಡಿಯಿಟ್ಟಿದ್ದಾರೆ. ಈ ಸಂದರ್ಭದಲ್ಲಿ ಅವರ ಪತಿ ರಾಜ್ ಕುಂದ್ರಾ ವಿಶೇಷವಾಗಿ ತನ್ನ ಪ್ರೀತಿಪಾತ್ರದ ಮಡದಿಗೆ ಬರ್ತ್ ಡೇ ವಿಷಸ್ ತಿಳಿಸಿದ್ದಾರೆ.

“ನಮ್ಮದು ತುಂಬಾ ಸುಂದರವಾದ ಪ್ರಯಾಣ. ಸಮಯ ಹಿಂದಕ್ಕೆ ಹೋಗಬೇಕೆಂದಿದೆ. ಆಗ ನಿನ್ನನ್ನು ಇನ್ನಷ್ಟು ಬೇಗ ಬೆರೆತು ಇನ್ನೂ ಹೆಚ್ಚು ಪ್ರೀತಿಸಬಹುದು. ನಿನ್ನ ಆಲೋಚನೆಗಳು ನನ್ನನ್ನು ಎಚ್ಚರವಾಗಿರುವಂತೆ ಮಾಡುತ್ತವೆ. ನಿನ್ನ ಬಗ್ಗೆ ಕಾಣುವ ಕನಸುಗಳು ನನ್ನನ್ನು ನಿದ್ದೆಗೆ ದೂಡುತ್ತವೆ. ನಿನ್ನೊಂದಿಗಿದ್ದರೆ ಬದುಕಿಯೇ ಇದ್ದೇನೆ ಎನ್ನಿಸುತ್ತದೆ. ಐ ಲವ್ ಯೂ ಮೈ ಗಾರ್ಜಿಯಸ್ ಗರ್ಲ್‌ಫ್ರೆಂಡ್. ನಾನು ಸಾಯುವವರೆಗೂ ಪ್ರೀತಿಸುತ್ತಲೇ ಇರುತ್ತೇನೆ” ಎಂದು ಇನ್‍ಸ್ಟಾಗ್ರಾಮ್‌ನಲ್ಲಿ ಹೇಳುತ್ತಾ ಇದಕ್ಕೆ ಸಂಬಂಧಿಸಿದಂತೆ ವೀಡಿಯೋವೊಂದನ್ನು ಹಂಚಿಕೊಂಡಿದ್ದಾರೆ.

ಇಬ್ಬರೂ ಮೊದಲ ಸಲ ಭೇಟಿಯಾದಾಗಿನ ಫೋಟೋಗಳಿಂದ ಹಿಡಿದು, ಮಗುವಾಗುವ ತನಕದ ಅಪರೂಪದ ಫೋಟೋಗಳ ವೀಡಿಯೋವನ್ನು ಹಂಚಿಕೊಂಡಿದ್ದಾರೆ. ಒಂದೊಂದು ಫೋಟೋ ಮೇಲೂ ಕ್ಯಾಪ್ಷನ್ ನೀಡಿ ರೂಪಿಸಿರುವ ಈ ವೀಡಿಯೋದಲ್ಲಿ ಪತ್ನಿ ಮೇಲಿನ ತನ್ನ ಪ್ರೀತಿಯನ್ನು ವ್ಯಕ್ತಪಡಿಸಿರುವುದು ನೇಟಿಜನ್ಸ್‌ ಮನಸಿಗೆ ತಾಕಿದೆ. ವೀಡಿಯೋ ಕೊನೆಯಲ್ಲಿ “ಹ್ಯಾಪಿ ಬರ್ತ್‌ಡೇ ಮೈ ಡಾರ್ಲಿಂಗ್ ವೈಫ್” ಎಂದು ಬರೆದಿದ್ದಾರೆ.

Comments are closed.