ರಾಷ್ಟ್ರೀಯ

ಶೀಘ್ರವೇ ವಿಜಯ್‌ ಮಲ್ಯ ಇಂಡಿಯಾಕ್ಕೆ ಗಡೀಪಾರು: ಎಂಇಎ ವಕ್ತಾರ

Pinterest LinkedIn Tumblr


ಹೊಸದಿಲ್ಲಿ : ಭಾರತೀಯ ಬ್ಯಾಂಕುಗಳಿಗೆ 9,000 ಕೋಟಿ ರೂ. ಸಾಲವನ್ನು ಸುಸ್ತಿ ಇರಿಸಿ ಲಂಡನ್‌ಗೆ ಪಲಾಯನ ಮಾಡಿರುವ ಮದ್ಯ ದೊರೆ ವಿಜಯ್‌ ಮಲ್ಯ ಅವರನ್ನು ಭಾರತಕ್ಕೆ ಗಡೀಪಾರು ಮಾಡಿಸಿಕೊಳ್ಳುವ ಎಲ್ಲ ಪ್ರಯತ್ನಗಳನ್ನು ಸರಕಾರ ಮಾಡುತ್ತಿದೆ ಎಂದು ವಿದೇಶ ವ್ಯವಹಾರಗಳ ಸಚಿವಾಲಯದ ವಕ್ತಾರ ರವೀಶ್‌ ಕುಮಾರ್‌ ಹೇಳಿದ್ದಾರೆ.

ಮಲ್ಯ ಅವರನ್ನು ಭಾರತಕ್ಕೆ ಗಡೀಪಾರು ಮಾಡುವಂತೆ ಭಾರತ ಸರಕಾರ 2017ರ ಫೆಬ್ರವರಿಯಲ್ಲೇ ಬ್ರಿಟನ್‌ ಸರಕಾರವನ್ನು ಅಧಿಕೃತವಾಗಿ ಕೇಳಿಕೊಂಡಿತ್ತು ಎಂದವರು ಹೇಳಿದ್ದಾರೆ.

ಮಲ್ಯ ವಿರುದ್ಧದ ಗಡೀಪಾರು ವಿಚಾರಣೆ ಮುಗಿದಿದೆ. ನಾವೀಗ ನ್ಯಾಯಾಲಯದ ತೀರ್ಪನ್ನು ಎದುರು ನೋಡುತ್ತಿದ್ದೇವೆ. ಅದು ಬಂದ ಬಳಿಕ ಮಲ್ಯ ಭಾರತಕ್ಕೆ ಬೇಗನೆ ಗಡೀಪಾರಾಗಲಿದ್ದಾರೆ ಎಂದು ರವೀಶ್‌ ಕುಮಾರ್‌ ಹೇಳಿದರು.

Comments are closed.