ಹೊಸದಿಲ್ಲಿ: ರಾಷ್ಟ್ರಪತಿ ಭವನದ ಕೆಲಸಗಾರರ ವಸತಿಗೃಹದಲ್ಲಿ ಶುಕ್ರವಾರ ವ್ಯಕ್ತಿಯೊಬ್ಬನ ಶವ ಪತ್ತೆಯಾಗಿದೆ.
ಮೃತನನ್ನು ತ್ರಿಲೋಕಚಂದ್ರ ಎಂದು ಗುರುತಿಸಲಾಗಿದ್ದು ಆತ ರಾಷ್ಟ್ರಪತಿ ಭವನದಲ್ಲಿ 4ನೇ ದರ್ಜೆಯ ಉದ್ಯೋಗಿಯಾಗಿದ್ದ. ಆತ ಕೆಲ ಸಮಯದಿಂದ ಅನಾರೋಗ್ಯ ಪೀಡಿತನಾಗಿದ್ದ ಎಂದು ಹೇಳಲಾಗುತ್ತಿದೆ.
ಗುರುವಾರ ರಾತ್ರಿ ಆತನ ಕೊಠಡಿಯಿಂದ ಕೆಟ್ಟ ವಾಸನೆ ಬರುತ್ತಿದ್ದು, ಈ ಬಗ್ಗೆ ನೆರೆಹೊರೆಯವರು ಪೊಲೀಸರಿಗೆ ದೂರು ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ಪೊಲೀಸರು ಒಳಗಿಂದ ಚಿಲಕ ಹಾಕಲಾಗಿದ್ದ ಕೋಣೆಯ ಕದ ಒಡೆದಾಗ ಆತ ಸಾವನ್ನಪ್ಪಿರುವುದು ಬೆಳಕಿಗೆ ಬಂದಿದೆ.
ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಆ ಬಳಿಕವಷ್ಟೇ ಸಾವಿಗೆ ಕಾರಣವೇನೆಂದು ತಿಳಿದು ಬರಲಿದೆ.
ಮೃತನ ಪರಿವಾರದವರು ಕಳೆದ ಕೆಲ ದಿನಗಳಿಂದ ನಗರದಿಂದ ಹೊರಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
Comments are closed.