ಮನೋರಂಜನೆ

ಇನ್‌ಸ್ಟಾಗ್ರಾಮ್‌ನಲ್ಲಿ ಹೆಸರು ಬದಲಾಯಿಸಿಕೊಂಡ ಸೋನಮ್ ಕಪೂರ್

Pinterest LinkedIn Tumblr


ಬಾಲಿವುಡ್‌ನ ಸ್ಟೈಲಿಶ್ ತಾರೆ ಸೋನಮ್ ಕಪೂರ್ ಮಂಗಳವಾರ (ಮೇ 8) ದಾಂಪತ್ಯ ಜೀವನಕ್ಕೆ ಅಡಿಯಿಟ್ಟಿದ್ದಾರೆ. ತನ್ನ ಬಹುಕಾಲದ ಗೆಳೆಯ ಹಾಗೂ ಉದ್ಯಮಿ ಆನಂದ್ ಅಹುಜಾ ಜತೆ ಸಪ್ತಪದಿ ತುಳಿಸಿದ್ದಾರೆ. ಇವರ ಮದುವೆಗೆ ಸಂಬಂಧಿಸಿದ ಚಿತ್ರಗಳು ಸಾಮಾಜಿಕ ಮಾಧ್ಯಮಗಳಲ್ಲಿ ಸಖತ್ ಸದ್ದು ಮಾಡಿದವು.

ಸೋನಮ್ ಕೊರಳನ್ನು ಮಂಗಳಸೂತ್ರ ಅಲಂಕರಿಸುತ್ತಿದ್ದಂತೆ ಇನ್‌ಸ್ಟಾಗ್ರಾಮ್‌ನಲ್ಲಿ ತಮ್ಮ ಹೆಸರಿನ ಜತೆಗೆ ’ಅಹುಜಾ’ ಸೇರಿಸಿಕೊಂಡಿದ್ದಾರೆ. ಈ ಮೂಲಕ ತಾವಿನ್ನು ಗೃಹಿಣಿ ಎಂಬುದನ್ನು ಇಡೀ ಜಗತ್ತಿಗೆ ಸರಳವಾಗಿ ಸಾರಿದ್ದಾರೆ ಸೋನಮ್.

ವರ್ಣರಂಜಿತವಾಗಿ ನಡೆದ ಮೆಹಂದಿ, ಸಂಗೀತ್ ಕಾರ್ಯಕ್ರಮಗಳ ಬಳಿಕ ಅದ್ದೂರಿಯಾಗಿ ಇಂದು ಮದುವೆ ನೆರವೇರಿತು. ಬಾಲಿವುಡ್‌ನ ಹಲವಾರು ತಾರೆಗಳು ಮದುವೆಗೆ ಆಗಮಿಸಿ ನೂತನ ದಾಂಪತ್ಯಕ್ಕೆ ಶುಭಕೋರಿದರು. ಮುಂಬೈನಲ್ಲಿ ಸೋನಮ್ ಮದುವೆ ಅದ್ದೂರಿಯಾಗಿ ನಡೆಯಿತು.

Comments are closed.