ಮನೋರಂಜನೆ

ಸಾಧು ಕೋಕಿಲಾರನ್ನು ಹುಡುಕಿ ಕೊಡಿ ಎಂದು ಟ್ವೀಟ್ ಮಾಡಿದ ನಾಗತಿಹಳ್ಳಿ

Pinterest LinkedIn Tumblr


‘ಸ್ಟುಡಿಯೋಗೆ ಬಂದು ಎರಡು ಸಾಲು ಅದ್ಭುತವಾಗಿ ಹಾಡಿ ಅರ್ಧ ಗಂಟೇಲಿ ಬರ್ತೀನಿ ಅಂತ ಯಾವುದೋ ರಾಜಕಾರಣಿಯ ಹಿಂದೆ ಹೋಗಿ ಒಂದು ವಾರವಾಯ್ತು. ದಯವಿಟ್ಟು ಯಾರಾದರೂ ಸಾಧುಕೋಕಿಲಾ ಹುಡುಕಿಕೊಡಿ. ಚರಣ ಬಾಕಿ ಇದೆ…’ ಹೀಗಂತ ಟ್ವೀಟ್ ಮಾಡಿದ್ದಾರೆ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್.

’ತಾರಕಾಸುರ’ ಚಿತ್ರಕ್ಕಾಗಿ ಅವರೊಂದು ಹಾಡು ಬರೆದಿದ್ದು, ಅದರ ಬಾಕಿ ಕೆಲಸವನ್ನು ಮುಗಿಸದೆ ಸಾಧು ಕೋಕಿಲಾ ಚುನಾವಣಾ ಪ್ರಚಾರದಲ್ಲಿ ಭಾಗಿಯಾಗಿರುವುದು ನಾಗತಿಹಳ್ಳಿ ಚಂದ್ರಶೇಖರ್ ಅವರಿಗೆ ಸಹಜವಾಗಿ ಸ್ವಲ್ಪ ಬೇಸರ ತರಿಸಿದೆ.

ಸಾಮಾನ್ಯವಾಗಿ ಎಲ್ಲರನ್ನೂ ನಕ್ಕು ನಲಿಸುವ ಸಾಧು ಕೋಕಿಲಾ ಈ ಹಾಡಿನಲ್ಲಿ ಕಣ್ಣೀರು ತರಿಸುತ್ತಾರೆ. ಈ ಹಾಡನ್ನು ಮೂರು ಕಂತಲ್ಲಿ ಮೂರು ಇನ್‌ಸ್ಟಾಲ್‍ಮೆಂಟ್‌ನಲ್ಲಿ ಹಾಡುತ್ತಿದ್ದಾರೆ. ಇವರು ಅಷ್ಟು ಬಿಜಿಯಾಗಿದ್ದಾರೆ. ಅವರನ್ನು ಈಗ ಬಿಟ್ಟು ಕಳುಹಿಸುತ್ತಿದ್ದೀವಿ. ಸಂಜೆ ಬರದಿದ್ದರೆ ಪ್ರೆಸ್ ಕ್ಲಬ್‌ನಲ್ಲಿ ಬಂದು ಗಲಾಟೆ ಮಾಡುತ್ತೇನೆ ಎಂದು ಸಾಧು ಸಮ್ಮುಖದಲ್ಲೇ ತಮಾಷೆಗೆ ನಾಗತಿಹಳ್ಳಿ ಚಂದ್ರಶೇಖರ್ ಹೇಳಿದ್ದರು.

ಅದಕ್ಕೆ ಸಂಬಂಧ ಪಟ್ಟ ವೀಡಿಯೋವನ್ನೂ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಆಗ ಅರ್ಜೆಂಟಾಗಿ ಹೋಗಬೇಕು ಎಂದು ಹೋದವರು ಒಂದು ವಾರವಾದರೂ ಬಂದಿಲ್ಲ. ದಯವಿಟ್ಟು ಯಾರಾದರೂ ಸಾಧುಕೋಕಿಲಾ ಹುಡುಕಿಕೊಡಿ. ಚರಣ ಬಾಕಿ ಇದೆ ಎಂದು ವಿನಂತಿಸಿಕೊಂಡಿದ್ದಾರೆ ನಾಗತಿಹಳ್ಳಿ ಚಂದ್ರಶೇಖರ್. ಕಾಂಗ್ರೆಸ್ ಪ್ರಚಾರದ ರೋಡ್ ಶೋನಲ್ಲಿ ಭಾಗಿಯಾಗಿರುವ ಸಾಧು ಫೋಟೋವನ್ನೂ ಒಬ್ಬರು ಹಂಚಿಕೊಂಡಿದ್ದು ಇಲ್ಲಿದ್ದಾರೆ ನೋಡಿ ಸಾಧು ಎಂದು ಹೇಳಿದ್ದಾರೆ.

ತಾರಕಾಸುವ ಚಿತ್ರವನ್ನು ರಥಾವರ ಚಿತ್ರ ನಿರ್ದೇಶಿಸಿದ್ದ ಚಂದ್ರಶೇಖರ್ ಬಂಡಿಯಪ್ಪ ನಿರ್ದೇಶಿಸುತ್ತಿದ್ದಾರೆ. ಧರ್ಮ ವಿಶ್ ಸಂಗೀತ ಈ ಚಿತ್ರಕ್ಕಿದ್ದು ಸಾಧು ಕೋಕಿಲ ಒಂದು ಹಾಡನ್ನು ಹಾಡಿದ್ದಾರೆ. ಈ ಚಿತ್ರದ ಮೂಲಕ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಕಾರ್ಯದರ್ಶಿ ನರಸಿಂಹಲು ಪುತ್ರ ವೈಭವ್ ಗಾಂಧಿನಗರಕ್ಕೆ ಪರಿಚಯವಾಗುತ್ತಿದ್ದಾರೆ.

Comments are closed.