ಕ್ರೀಡೆ

ಗೆಲುವಿನ ಉಡುಗೊರೆ ನೀಡಿದ ವಿರಾಟ್‌ಗೆ ಅನುಷ್ಕಾ ವಿಶೇಷ ಸಂದೇಶ

Pinterest LinkedIn Tumblr


‌ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಚಾಂಪಿಯನ್‌ಶಿಪ್‌ನಲ್ಲಿ ಬುಧವಾರ ಮುಂಬಯಿ ಇಂಡಿಯನ್ಸ್ ವಿರುದ್ಧ ನಡೆದ ಮಹತ್ವದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು 14 ರನ್‌ಗಳ ಅಂತರದ ಗೆಲುವನ್ನು ದಾಖಲಿಸಿತ್ತು. ಈ ಮೂಲಕ ಪ್ಲೇ-ಆಫ್ ಕನಸನ್ನು ಜೀವಂತವಾಗಿರಿಸಿತ್ತು.

ಈ ಮೂಲಕ ಹುಟ್ಟುಹಬ್ಬದ ಸಂಭ್ರಮದಲ್ಲಿರುವ ತಮ್ಮ ಮಡದಿ ಅನುಷ್ಕಾ ಶರ್ಮಾ ಅವರಿಗೆ ವಿರಾಟ್ ಕೊಹ್ಲಿ ಗೆಲುವಿನ ಉಡುಗೊರೆಯನ್ನು ನೀಡಿದ್ದರು.

ಪಂದ್ಯದ ಬಳಿಕ ಈ ಬಗ್ಗೆ ಉಲ್ಲೇಖಿಸಿರುವ ವಿರಾಟ್ ಕೊಹ್ಲಿ, ತಮ್ಮ ಪಾಲಿಗಿದು ಈ ಗೆಲುವು ಅತ್ಯಂತ ವಿಶೇಷವೆನಿಸಿದೆ ಎಂದು ಹೇಳಿಕೊಂಡಿದ್ದರು.

ಈ ಮುನ್ನ ಪತ್ನಿಗೆ ಸಿಹಿ ತಿನಿಸುವ ಚಿತ್ರ ಹಂಚಿಕೊಂಡಿರುವ ವಿರಾಟ್ ಹುಟ್ಟುಹಬ್ಬದ ಶುಭಾಶಯದಲ್ಲಿ, “ನನಗೆ ಗೊತ್ತಿರುವ ಅತ್ಯಂತ ಧನಾತ್ಮಕ ಹಾಗೂ ಪ್ರಾಮಾಣಿಕ ವ್ಯಕ್ತಿ” ಎಂದು ಶ್ಲಾಘಿಸಿದ್ದರು.

ಇದಕ್ಕೆ ಪ್ರತಿಯಾಗಿ ಅನುಷ್ಕಾ ಶರ್ಮಾ ಸಹ ವಿಶೇಷ ಸಂದೇಶವನ್ನು ರವಾನಿಸಿದ್ದಾರೆ. “ವಿಶ್ವದಲ್ಲೇ ಅತ್ಯುತ್ತಮ, ದಯಾಮಯಿ ಮತ್ತು ಧೈರ್ಯಶಾಲಿ ವ್ಯಕ್ತಿಯ ಜತೆಗಿನ ಬೆಸ್ಟ್ ಬರ್ತ್ ಡೇ; ನನ್ನ ಪ್ರೀತಿಯನ್ನು ಬಹಳ ವಿಶೇಷವಾಗಿಸಿದ್ದಕ್ಕಾಗಿ ಲವ್ ಯೂ” ಎಂದಿದ್ದಾರೆ.

ಅಂತೂ ಅನುಷ್ಕಾ ಸಾನಿಧ್ಯದಲ್ಲೇ ಅದು ಕೂಡಾ ಹುಟ್ಟುಹಬ್ಬದಂದು ಆರ್‌ಸಿಬಿ ಗೆಲುವನ್ನು ದಾಖಲಿಸಿರುವುದು ಅಭಿಮಾನಿಗಳಲ್ಲಿ ಖುಷಿ ತರಿಸಿದೆ.

Comments are closed.