ಮನೋರಂಜನೆ

ಕನ್ನಡಕ್ಕೆ ಹೇಟ್‌ಸ್ಟೋರಿ ಚಿತ್ರದ ಹಾಟ್‌ ನಟಿ ಎಂಟ್ರಿ

Pinterest LinkedIn Tumblr

*ಪದ್ಮಾ ಶಿವಮೊಗ್ಗ

ಇಡೀ ಬಾಲಿವುಡ್‌ ಅನ್ನು ತುದಿಗಾಲ ಮೇಲೆ ನಿಲ್ಲಿಸಿದ್ದ ಹೇಟ್‌ಸ್ಟೋರಿ-4 ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದ ಇಹಾನಾ ದಿಲ್ಲೋನ್‌ ಇದೀಗ ಸ್ಯಾಂಡಲ್‌ವುಡ್‌ ಬಂದಿದ್ದಾರೆ.

ವಿಜಯ್‌ ಮಹೇಶ್‌ ನಾಯಕನಾಗಿ ನಟಿಸಲಿರುವ ಚಿತ್ರ ‘ಐ ಕಮಿಂಗ್‌’ ಚಿತ್ರದಲ್ಲಿ ಅವರು ಕಾಣಿಸಿಕೊಳ್ಳುತ್ತಿದ್ದು, ಅದು ಸಸ್ಪೆನ್ಸ್‌ ಮತ್ತು ಥ್ರಿಲ್ಲರ್‌ ಚಿತ್ರವಾಗಿದೆ. ಪಂಜಾಬಿ ಮೂಲದ ಇಹಾನಾ ಈಗಾಗಲೇ ಅನೇಕ ಪಂಜಾಬಿ ಸಿನಿಮಾಗಳಲ್ಲಿ ನಟಿಸಿದ್ದು, ಬಾಲಿವುಡ್‌ನಲ್ಲಿ ಬಿಝಿಯಾಗಿದ್ದಾರೆ.

‘ರೈತರ ಸಮಸ್ಯೆಯ ಎಳೆಯೊಂದಿಗೆ ಬರೆದ ಕಥೆ ಚಿತ್ರದಲ್ಲಿದೆ. ಅಂಡರ್‌ವರ್ಲ್ಡ್‌ ಡಾನ್‌ ಮಗಳ ಪಾತ್ರದಲ್ಲಿ ಇಹಾನಾ ನಟಿಸಲಿದ್ದಾರೆ. ಈ ಪಾತ್ರಕ್ಕೆ ಎತ್ತರದ ನಿಲುವಿನ ನಾಯಕಿ ಬೇಕಿತ್ತು. ಇಹಾನಾ 5.8 ಫೀಟ್‌ ಎತ್ತರವಿದ್ದಾರೆ. ಚಿತ್ರದ ಕಥೆ ಕೇಳಿ ಅವರು ಬಹಳ ಇಷ್ಟ ಪಟ್ಟರು’ ಎಂದು ನಿರ್ದೇಶಕ, ನಾಯಕ ನಟ ವಿಜಯ್‌ ಮಹೇಶ್‌ ತಿಳಿಸಿದ್ದಾರೆ.

ಚಿತ್ರದಲ್ಲಿ ಸ್ಮಗ್ಲಿಂಗ್‌ ಸ್ಟೋರಿ ಇದೆ. ಇಡೀ ಚಿತ್ರವನ್ನು ಅಮೆರಿಕ ಮತ್ತು ಕೆನಡಾದಲ್ಲಿ ಚಿತ್ರೀಕರಿಸಲು ವಿಜಯ್‌ ನಿರ್ಧರಿಸಿದ್ದಾರೆ. ‘ನಾಯಕಿ ಅಮೆರಿಕದವಳು. ರಾಣಿಯಂತೆ ಇರುತ್ತಾಳೆ. ಹಿಂದಿಯಲ್ಲೂ ಇವರೇ ನಟಿಸಲಿದ್ದಾರೆ. ನಾಯಕನ ಪಾತ್ರಕ್ಕೆ ಬಾಲಿವುಡ್‌ನವರನ್ನೇ ಹುಡುಕುತ್ತಿದ್ದೇನೆ’ ಎಂದಿದ್ದಾರೆ ವಿಜಯ್‌. ನಾಯಕನ ಪಾತ್ರಕ್ಕೆ ಡಬಲ್‌ ಶೇಡ್‌ ಇದೆ. ರಂಗಿತರಂಗ ಮತ್ತು ರಾಜರಥ ಚಿತ್ರಕ್ಕೆ ಕೆಲಸ ಮಾಡಿದ ಛಾಯಾಗ್ರಾಹಕ ವಿಲಿಯಂ ಡೇವಿಡ್‌ ಈ ಚಿತ್ರಕ್ಕೆ ಕ್ಯಾಮೆರಾ ಹಿಡಿಯಲಿದ್ದಾರೆ. ಚಿತ್ರ ಮುಂದಿನ ತಿಂಗಳು ಸೆಟ್ಟೇರಲಿದೆ.

Comments are closed.