ಮನೋರಂಜನೆ

ನೀವು ದರ್ಶನ್ ಜೊತೆ ಫಿಲ್ಮ್ ಮಾಡ್ತೀರಾ ಎಂಬ ಪ್ರಶ್ನೆಗೆ ಕಿಚ್ಚ ಸುದೀಪ್ ಹೇಳಿದ್ದೇನು…?

Pinterest LinkedIn Tumblr

ಬೆಂಗಳೂರು: ಸ್ಯಾಂಡಲ್ ವುಡ್ ನ ಬಿಗ್ ಸ್ಟಾರ್ ಗಳಾದ ಚಾಲೆಂಜಿಂಗ್ ದರ್ಶನ್ ಹಾಗೂ ಕಿಚ್ಚ ಸುದೀಪ್ ಒಂದೇ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಾರ ಎಂಬ ಅಭಿಮಾನಿಯ ಪ್ರಶ್ನೆಗೆ ಸುದೀಪ್ ಉತ್ತರಿಸಿದ್ದು, ಒಳ್ಳೆಯ ಕಥೆ ಸಿಕ್ಕರೆ ಸಿನಿಮಾ ಮಾಡುವುದಾಗಿ ಹೇಳಿದ್ದಾರೆ.

ಕನ್ನಡ ಸಿನಿ ರಂಗದಲ್ಲಿ ಅಪಾರ ಅಭಿಮಾನಿಗಳನ್ನು ಹೊಂದಿರುವ ಇಬ್ಬರು ನಾಯಕರ ನಡುವೆ ಸ್ಟಾರ್ ವಾರ್ ನಡೆಯುತ್ತಿದೆ ಎನ್ನಲಾಗಿತ್ತು. ಈ ಕುರಿತು ದರ್ಶನ್ ಅಭಿಮಾನಿಯೊಬ್ಬರು ಸುದೀಪ್ ಅವರಿಗೆ ಟ್ವೀಟ್ ಮಾಡಿದ್ದರು. ಈ ಟ್ವೀಟ್ ನಲ್ಲಿ ದರ್ಶನ್ ಅವರ ಜೊತೆ ಸಿನಿಮಾ ಮಾಡುತ್ತೀರಾ? ಕನ್ನಡದಲ್ಲಿ ನಿಮ್ಮ ನಡುವೆ ಉತ್ತಮ ಸಂಬಂಧವಿಲ್ಲ ಎಂಬ ಮಾಹಿತಿ ಲಭಿಸಿದೆ. ನಾನು ನಿಮ್ಮಿಬ್ಬರ ಅಭಿಮಾನಿಯಾಗಿದ್ದು, ದರ್ಶನ್ ಅವರೊಂದಿಗೆ ಒಂದು ಸಿನಿಮಾ ಮಾಡುತ್ತೀರಾ ಅಣ್ಣ ಎಂದು ಕೇಳಿದ್ದರು.

ಅಭಿಮಾನಿಗಳ ಜೊತೆ ನಿರಂತರವಾಗಿ ಸಂಪರ್ಕದಲ್ಲಿರುವ ಸುದೀಪ್ ಈ ಟ್ವೀಟ್ ಗೆ ಉತ್ತರಿಸಿದ್ದು, ದರ್ಶನ್ ಹಾಗೂ ನಾನು ಉತ್ತಮ ಸ್ನೇಹಿತರು. ಇಬ್ಬರನ್ನು ಮೆಚ್ಚಿಸುವ ಒಳ್ಳೆಯ ಸ್ಕ್ರಿಪ್ಟ್ ಸಿಕ್ಕರೆ ದರ್ಶನ್ ಜೊತೆ ಸ್ಕ್ರೀನ್ ಶೇರ್ ಮಾಡುತ್ತೇನೆ ಎಂದು ಹೇಳಿದ್ದಾರೆ.

ಸುದೀಪ್ ಅವರ ಈ ಟ್ವೀಟ್ ನೊಂದಿಗೆ ಅಭಿಮಾನಿಗಳಲ್ಲಿದ್ದ ಹಲವು ಸಂದೇಹಗಳು ದೂರವಾಗಿದೆ. ಒಂದೊಮ್ಮೆ ಒಳ್ಳೆಯ ಕಥೆಯೊಂದಿಗೆ ದರ್ಶನ್ ಹಾಗೂ ಸುದೀಪ್ ಸ್ಕ್ರೀನ್ ಶೇರ್ ಮಾಡಿದರೆ ಬಾಕ್ಸ್ ಆಫೀಸ್ ಚಿಂದಿಯಾಗಲಿದೆ. ಅದಷ್ಟು ಬೇಗ ಇಬ್ಬರು ತೆರೆ ಮೇಲೆ ಒಂದಾಗಿ ಕಾಣಿಸಿಕೊಳ್ಳಲಿ ಎಂಬುವುದು ಅಭಿಮಾನಿಗಳು ಆಶಯ ವ್ಯಕ್ತಪಡಿಸಿದ್ದಾರೆ.

ದರ್ಶನ್ ಜೊತೆ ಸಿನಿಮಾ ಮಾಡ್ತೀರಾ ಎನ್ನುವ ಪ್ರಶ್ನೆಯನ್ನು ಸುದೀಪ್ ಅವರಿಗೆ ಅಭಿಮಾನಿಗಳು ಕೇಳುವುದು ಇದೆ ಮೊದಲಲ್ಲ. 2017ರಲ್ಲಿ ಬೆಂಗಳೂರಿನ ಗ್ಲೋಬಲ್ ಅಕಾಡೆಮಿ ಆಫ್ ಟೆಕ್ನಾಲಜಿ ಕಾಲೇಜಿನಲ್ಲಿ ನಡೆದ ಫೆಸ್ಟ್ ನಲ್ಲಿ ನಟ ಕಿಚ್ಚ ಸುದೀಪ್ ಭಾಗವಹಿಸಿದ್ದರು. ಈ ವೇಳೆ ಅಭಿಮಾನಿಯೊಬ್ಬರು, ಬಾಸ್ ಸ್ಟ್ರೇಟ್ ಆಗಿ ಕೇಳ್ತಾ ಇದ್ದೀನಿ, ದರ್ಶನ್ ಅವರನ್ನ ನಿಮ್ಮನ್ನ ಒಂದೇ ಮೂವಿಯಲ್ಲಿ ನೋಡೋಕೆ ತುಂಬಾ ಆಸೆ ಇದೆ. ಇಸ್ ಇಟ್ ಪಾಸಿಬಲ್ ಎಂದು ಪ್ರಶ್ನೆ ಹಾಕಿದ್ರು.

ಈ ಪ್ರಶ್ನೆಗೆ ಸುದೀಪ್, ನಾನು ಚಿಕ್ಕವನಾಗಿರಬೇಕಾದ್ರೆ ನನಗೆ ನಮ್ಮಮ್ಮ ಏನೂ ಇಲ್ಲ ಅಂತ ಹೇಳೇ ಇಲ್ಲ. ನಾನು ಏನ್ ಕೇಳಿದ್ರೂ ನಮ್ ತಾಯಿ ಕೊಡ್ಸೋರು. ಆಗ ನಮ್ಮ ತಾಯಿಗೆ , ಅಮ್ಮ ಸೂರ್ಯ, ಚಂದ್ರ ಯಾಕೆ ಒಟ್ಟಿಗೆ ಕಾಣಿಸಿಕೊಳ್ಳೊಲ್ಲ ಅಂತ ಕೇಳ್ದೆ. ಆವಾಗ ನಮ್ ತಾಯಿ ಹೇಳಿದ್ರು, ಏನ್ಮಾಡ್ಲಿ ಕಂದಾ, ಸೂರ್ಯ ಬಂದಾಗ ಬೆಳಕಾಗುತ್ತೆ, ಚಂದ್ರ ಬಂದಾಗ ಕತ್ತಲಾಗುತ್ತೆ. ಅದು ಅಲ್ಲೇ ಸರಿ, ಇದು ಇಲ್ಲೇ ಸರಿ ಅಂತ ಥ್ಯಾಂಕ್ಯೂ ಹೇಳಿ ಮಾತು ಮುಗಿಸಿದ್ದರು.

Comments are closed.