ಅಂತರಾಷ್ಟ್ರೀಯ

ಸಹಾಯಕ್ಕಾಗಿ ಯಾರು ಇಲ್ಲದ ವೇಳೆ ಯೂಟ್ಯೂಬ್ ನೋಡಿ ಹೋಟೆಲ್ ರೂಮ್ ನಲ್ಲೇ ಮಗುವಿಗೆ ಜನ್ಮ ನೀಡಿದ ಮಹಿಳೆ ! ವೈರಲ್ ಸ್ಟೋರಿ

Pinterest LinkedIn Tumblr

ಇಸ್ತಾಂಬುಲ್: ಮಹಿಳೆಯೊಬ್ಬಳು ಅಮೆರಿಕದಿಂದ ಜರ್ಮನಿಗೆ ಪ್ರಯಾಣ ನಡೆಸಿದ ಬಳಿಕ ಹೆರಿಗೆ ನೋವು ಕಾಣಿಸಿಕೊಂಡು ಸಹಾಯಕ್ಕಾಗಿ ಯಾರು ಇಲ್ಲದ ವೇಳೆ ಯೂಟ್ಯೂಬ್ ಸಹಾಯದಿಂದ ಹೋಟೆಲ್ ರೂಮ್‍ನಲ್ಲೇ ಮಗುವಿಗೆ ಜನ್ಮ ನೀಡಿದ್ದು, ಈ ಕುರಿತ ವರದಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

22 ವರ್ಷದ ಟಿಯಾ ಫ್ರಿಮನ್ ಮಗುವಿಗೆ ಜನ್ಮ ನೀಡಿದ ಮಹಿಳೆ. ಮೂಲತಃ ಅಮೆರಿಕ ನಿವಾಸಿಯಾಗಿರುವ ಈಕೆ ಕೆಲಸ ನಿಮಿತ್ತ ಜರ್ಮನಿ ತೆರಳುವ ಅನಿವಾರ್ಯ ಉಂಟಾಗಿತ್ತು. ಆದರೆ ಅದಾಗಲೇ ಈಕೆ ಗರ್ಭಿಣಿಯಾಗಿದ್ದು, ಜರ್ಮನಿಗೆ ತೆರಳುವ ಟರ್ಕಿ ಯಲ್ಲಿ ಟಿಯಾ ಮಗುವಿಗೆ ಜನ್ಮ ನೀಡುವ ಸಂದರ್ಭ ಎದುರಾಗಿದೆ.

ಈ ಮುನ್ನ ಟಿಯಾ ಪ್ರಯಾಣವನ್ನು ರದ್ದು ಗೊಳಿಸಲು ಆರ್ಥಿಕ ಸಮಸ್ಯೆ ಎದುರಾಗಿದ್ದು, ಅದ್ದರಿಂದ ಒಂಟಿಯಾಗಿಯೇ ಪ್ರಯಾಣ ನಡೆಸಲು ನಿರ್ಧರಿಸಿ ಮುಂದುವರೆಸುತ್ತಾರೆ. ಈ ವೇಳೆ ಟರ್ಕಿಗೆ ಆಗಮಿಸಿ ಹೋಟೆಲ್ ಒಂದರಲ್ಲಿ ರೂಮ್ ಪಡೆದು ತನ್ನ ಕಾರ್ಯದಲ್ಲಿ ತೊಡಗುತ್ತಾರೆ. ಈ ಮಧ್ಯೆ ಟಿಯಾ ಗೆ ಹೆರಿಗೆ ನೋವು ಕಾಣಿಸಿಕೊಂಡಿದ್ದು, ಯಾರ ಸಹಾಯವು ಪಡೆಯಲು ಸಾಧ್ಯವಾಗುವುದಿಲ್ಲ. ಈ ವೇಳೆ ಆಕೆ ಯೂಟ್ಯೂಬ್ ಸಹಾಯ ಪಡೆದು ಮಗುವಿಗೆ ಜನ್ಮ ನೀಡುತ್ತಾರೆ.

ಇದಾದ ಬಳಿಕ ಅಮೆರಿಕಗೆ ಹಿಂದಿರುಗಲು ಟಿಯಾ ಟರ್ಕಿ ವಿಮಾನ ನಿಲ್ದಾಣಕ್ಕೆ ಮಗುವಿನೊಂದಿಗೆ ಆಗಮಿಸಿದ ವೇಳೆ ಘಟನೆ ಬೆಳಕಿಗೆ ಬಂದಿದೆ. ತನ್ನ ಕಥೆಯನ್ನು ಟಿಯಾ ಸಾಮಾಜಿಕ ಜಾಲತಾಣದಲ್ಲಿ ವಿವರಿಸಿದ್ದು ಸದ್ಯ ಈ ಸ್ಟೋರಿ ವೈರಲ್ ಆಗಿದೆ.

ಘಟನೆ ಕುರಿತು ಮಾಹಿತಿ ನೀಡಿರುವ ಟಿಯಾ ತಾನು ಟರ್ಕಿಯ ಪ್ರಯಾಣದ ವೇಳೆ ಹೆರಿಗೆ ನೋವು ಕಾಣಿಸಿಕೊಂಡಿತ್ತು. ಈ ವೇಳೆ ತಾನು ಯಾರ ಸಹಾಯ ಪಡೆಯಲು ಸಾಧ್ಯವಾಗಲಿಲ್ಲ. ಸಾಮಾಜಿಕ ಜಾಲತಾಣ ನೆರವು ಪಡೆದು ತಾನೇ ಮಗುವಿಗೆ ಜನ್ಮ ನೀಡಿದೆ. ಮಗುವಿನ ಕರುಳ ಬಳ್ಳಿಯನ್ನು ತಾನೇ ಕತ್ತರಿಸಿದೆ. ಬಳಿಕ ಕೊಠಡಿಯನ್ನು ಸ್ವಚ್ಛಗೊಳಸಿ ಮಗುವಿನ ಆರೈಕೆ ಮಾಡಿದ್ದಾಗಿ ತಿಳಿಸಿದ್ದಾರೆ. ಬಳಿಕ ಟರ್ಕಿಯ ವಿಮಾನ ನಿಲ್ದಾಣದ ಅಧಿಕಾರಿಗಳಿಗೆ ತನ್ನ ಕಥೆ ಹೇಳಿ ಅವರನ್ನು ಮನವೊಲಿಸಿ ಮತ್ತೆ ಅಮೆರಿಕಗೆ ವಾಪಸ್ ಆಗಲು ಟಿಯಾ ಯಶಸ್ವಿಯಾಗಿದ್ದಾರೆ.

Comments are closed.