ಮಂಗಳೂರು, ಎಪ್ರಿಲ್ .28 : ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾಗಿರುವ ಯುವ ಮುಂದಾಳು, ಸಾಮಾಜಿಕ ನಾಯಕ ಆರ್. ಶ್ರೀಕರ್ ಪ್ರಭು ಅವರು ತಮ್ಮ ಧರ್ಮಪತ್ನಿ ಶ್ರೀಮತಿ ಸೀಮಾ ಕಾಮಾತ್ ಅವರೊಂದಿಗೆ ಶುಕ್ರವಾರ ಸಂಜೆ ನಗರದ ಬಿಜೈ ಅನೆಗುಂಡಿ ಪರಿಸರದಲ್ಲಿರುವ ಬಹಳ ಕಾರ್ನಿಕ ಕ್ಷೇತ್ರವಾಗಿರುವ ಕಲ್ಲುರ್ಟೀ ಕ್ಷೇತ್ರಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು.
ಇದೇ ಸಂದರ್ಭದಲ್ಲಿ ತಮ್ಮ ಚುನಾವಣಾ ಚಿಹ್ನೆಯಾಗಿ ಆರಿಸಿರುವ “ಆಟೋ ರಿಕ್ಷಾ”ದ ಪ್ರತಿರೂಪ ( ಮಾಡೇಲ್ ) ವನ್ನು ಶ್ರೀ ಕ್ಷೇತ್ರದ ಕಲ್ಲುರ್ಟೀ ಸನ್ನಿಧಿಯಲ್ಲಿಟ್ಟು ಪೂಜೆ ಸಲ್ಲಿಸಿದರು.
ಬಿಜೈ ಅನೆಗುಂಡಿ ಕ್ಷೇತ್ರದ ಕಲ್ಲುರ್ಟೀ ಸನ್ನಿಧಿಯ ಪ್ರಧಾನ ಅರ್ಚಕ, ಜ್ಯೋತಿಷಿ ಎಚ್.ಟಿ ರಾಧಾಕೃಷ್ಣ ಶಾಸ್ತ್ರಿಯವರು ಶ್ರೀಕರ್ ಪ್ರಭು ಅವರ ಚುನಾವಣಾ ಚಿಹ್ನೆಯಾದ “ಆಟೋ ರಿಕ್ಷಾ”ದ ಪ್ರತಿರೂಪವನ್ನು ಶ್ರೀ ದೇವರ ಸನ್ನಿಧಿಯಲ್ಲಿಟ್ಟು ವಿಶೇಷ ಪೂಜೆ ಸಲ್ಲಿಸಿ ಬಳಿಕ ಚುನಾವಣಾ ಅಭ್ಯರ್ಥಿ ಆರ್. ಶ್ರೀಕರ್ ಪ್ರಭು ಅವರಿಗೆ ಹಸ್ತಾಂತರಿಸಿದರು.
ಈ ಸಂದರ್ಭ ಶ್ರೀಕರ್ ಅಭಿಮಾನಿ ಬಳಗದ ಅಧ್ಯಕ್ಷರಾದ ಕೆ ಪಿ ಶೆಟ್ಟಿ ಬೇಡೆಮಾರ್, ಪ್ರದಾನ ಕಾರ್ಯದರ್ಶಿ ಪ್ರೇಮ ಚಂದ್ರ, ಸಂಚಾಲಕ ಅಶ್ವಿತ್ ಕುಮಾರ್, ಪದಾಧಿಕಾರಿಗಳಾದ ಸುರೇಶ್ ಶೆಟ್ಟಿ, ಅವಿನಾಶ್ ಶೆಟ್ಟಿ, ನಾಗೇಶ್, ಶರತ್ ಹಾಗೂ ಶ್ರೀಕರ್ ಪ್ರಭು ಅವರ ಅಪಾರ ಬೆಂಬಲಿಗರು ಹಾಗೂ ಅಭಿಮಾನಿಗಳು ಉಪಸ್ಥಿತರಿದ್ದರು.
Comments are closed.