ಕರಾವಳಿ

ಜನಸಾಮಾನ್ಯರು ಈ ಬಾರಿ ಸಿಪಿಎಂ ಬೆಂಬಲಿಸಲಿದ್ದಾರೆ : ಸಿಪಿಎಂ ದಕ್ಷಿಣ ಅಭ್ಯರ್ಥಿ ಸುನೀಲ್‌ಕುಮಾರ್ ಬಜಾಲ್

Pinterest LinkedIn Tumblr

ಮಂಗಳೂರು : ಮಂಗಳೂರು ನಗರ ದಕ್ಷಿಣ ವಿಧಾನಸಭಾ ಕ್ಷೇತ್ರದ ಸಿಪಿಎಂ ಅಭ್ಯರ್ಥಿ ಸುನೀಲ್‌ಕುಮಾರ್ ಬಜಾಲ್ ಅವರ ಎ.26ರಿಂದ ಮೇ 10ರವರೆಗೆ 14 ದಿನಗಳ ನಡೆಯುವ ವಾಹನ ಪ್ರಚಾರ ಜಾಥಾ ಆರಂಭಗೊಂಡಿದೆ.

ಈ ಜಾಥಾದ ನೇತೃತ್ವವನ್ನು ವಹಿಸಿದ ಸಂತೋಷ್ ಶಕ್ತಿನಗರ ಅವರಿಗೆ ನಗರ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಸಿಪಿಎಂನ ಅಭ್ಯರ್ಥಿ ಸುನೀಲ್‌ಕುಮಾರ್ ಬಜಾಲ್ ಧ್ವಜವನ್ನು ಹಸ್ತಾಂತರಿಸಿ ವಾಹನ ಪ್ರಚಾರ ಜಾಥಾಕ್ಕೆ ಚಾಲನೆ ನೀಡಿದ್ದಾರೆ.

ಚುನಾವಣಾ ಪ್ರಚಾರ ವಾಹನ ಜಾಥದಲ್ಲಿ ಮಾತನಾಡಿದ ಅವರು, ಜನಸಾಮಾನ್ಯರು ಈ ಬಾರಿ ಕತ್ತಿ-ಸುತ್ತಿಗೆ-ನಕ್ಷತ್ರ ಚಿಹ್ನೆಗೆ ಮತವನ್ನು ನೀಡಬೇಕೆಂದು ಮನವಿ ಮಾಡಿದರು. ವಾಹನ ಪ್ರಚಾರ ಜಾಥಾವು ಮಂಗಳೂರು ನಗರ ದಕ್ಷಿಣ ಕ್ಷೇತ್ರದಾದ್ಯಂತ ಸಂಚರಿಸಲಿದ್ದು, ಸುನೀಲ್‌ಕುಮಾರ್ ಬಜಾಲ್ ಅವರ ಚಳುವಳಿ ಜೀವನ ಹೋರಾಟದ ಹಿನ್ನೆಲೆ ಹಾಗೂ ಪಕ್ಷದ ವಿಚಾರಗಳನ್ನು ಮನೆ ಮನೆಗೂ ತಲುಪಿಸಲಿದೆ ಎಂದರು.

ಈ ವೇಳೆ ಮಂಗಳೂರು ನಗರ ದಕ್ಷಿಣ ವಿಧಾನಸಭಾ ಕ್ಷೇತ್ರದ ಚುನಾವಣಾ ಪ್ರಚಾರ ಸಮಿತಿಯ ಪ್ರಧಾನ ಕಾರ್ಯದರ್ಶಿ ಸಂತೋಷ್‌ಕುಮಾರ್ ಬಜಾಲ್ ಹಾಗೂ ಜಿಲ್ಲಾ ಮುಖಂಡರಾದ ಯೋಗೀಶ್ ಜಪ್ಪಿನಮೊಗರು, ಡಿವೈಎಫ್‌ಐ ಮಂಗಳೂರು ನಗರ ಅಧ್ಯಕ್ಷ ನವೀನ್ ಕೊಂಚಾಡಿ, ರಾಮಕೃಷ್ಣ ಅತ್ತಾವರ, ಹಿತೇಶ್ ಪೂಜಾರಿ, ಮುಸ್ತಫಾ ಮುಂತಾದವರು ಉಪಸ್ಥಿತರಿದ್ದರು.

Comments are closed.