ಮನೋರಂಜನೆ

ಬಾಲಿವುಡ್‍ನಲ್ಲಿ ಪೂಜಾ ಹೆಗಡೆ ಎರಡನೇ ಇನ್ನಿಂಗ್ಸ್

Pinterest LinkedIn Tumblr


ಮಂಗಳೂರು ಮೂಲದ ಬೆಡಗಿ ಪೂಜಾ ಹೆಗಡೆ ಬಾಲಿವುಡ್‍ನಲ್ಲಿ ಸೆಕೆಂಡ್ ಇನ್ನಿಂಗ್ಸ್ ಆರಂಭಿಸಿದ್ದಾರೆ. ತೆಲುಗು, ತಮಿಳು ಚಿತ್ರರಂಗದಲ್ಲಿ ಅಭಿನಯಿಸಿರುವ ಪೂಜಾ ಹೆಗಡೆ ಇದೀಗ ಮತ್ತೆ ಬಾಲಿವುಡ್‍ನಲ್ಲಿ ಅವಕಾಶ ಗಿಟ್ಟಿಸಿದ್ದಾರೆ.

’ಹೌಸ್‍ಫುಲ್’ ಸರಣಿಯಲ್ಲಿ ಬಂದಿರುವ ಸಿನಿಮಾಗಳೆಲ್ಲವೂ ಹೌಸ್‍ಫುಲ್ ಪ್ರದರ್ಶನ ಕಂಡು ಬಾಕ್ಸ್ ಆಫೀಸಲ್ಲಿ ಭರ್ಜರಿ ಕಲೆಕ್ಷನ್ ಮಾಡಿವೆ. ಇದೀಗ ಹೌಸ್‍ಫುಲ್ 4 ಸಿನಿಮಾ ತೆರೆಗೆ ತರಲು ನಿರ್ಮಾಪಕರು ಸಿದ್ಧವಾಗಿದ್ದು, ಪುಜಾ ಹೆಗಡೆಯನ್ನು ನಾಯಕಿಯನ್ನಾಗಿ ಆಯ್ಕೆ ಮಾಡಲಾಗಿದೆ ಎನ್ನುತ್ತಿವೆ ಮೂಲಗಳು. ಈ ಹಿಂದೆ ಪೂಜಾ ಹೆಗಡೆ ಬಾಲಿವುಡ್‍ನಲ್ಲಿ ’ಮೊಹೆಂಜೊ ದಾರೋ’ ಸಿನಿಮಾದಲ್ಲಿ ಅಭಿನಯಿಸಿದ್ದಾರೆ.

ಈ ಹಿಂದೆ ಕೃತಿ ಸನೋನ್ ಹೆಸರು ಕೇಳಿಬಂದಿತ್ತು. ಈಗ ’ಹೌಸ್‍ಫುಲ್’ ತಂಡಕ್ಕೆ ಪೂಜಾ ಹೆಗಡೆ ಸೇರ್ಪಡೆಯಾಗಿದ್ದಾರೆ. ಲಂಡನ್‍ನಲ್ಲಿ ಜುಲೈ ತಿಂಗಳಲ್ಲಿ ಸಿನಿಮಾ ಸೆಟ್ಟೇರಲಿದೆ. ಅಕ್ಷಯ್ ಕುಮಾರ್, ರಿತೇಶ್ ದೇಶ್‍ಮುಖ್ ಜತೆಗೆ ಬಾಬ್ಬಿ ಡಿಯೋಲ್ ಸಹ ಪಾತ್ರವರ್ಗದಲ್ಲಿರುತ್ತಾರೆ. ಈ ಸಲ ಪುನರ್ಜನ್ಮದ ಥೀಮ್ ಮೂಲಕ ಸಿನಿಮಾ ತೆರೆಗೆ ತರಲಾಗುತ್ತಿದೆ. 2019ರ ದೀಪಾವಳಿ ಹಬ್ಬಕ್ಕೆ ಪ್ರೇಕ್ಷಕರ ಮುಂದೆ ’ಹೌಸ್‍ಫುಲ್ 4’ ಬರಲಿದೆ.

Comments are closed.