ಮನೋರಂಜನೆ

ಕ್ಷೇತ್ರದ ಜನರಿಗೆ ನ್ಯಾಯ ಒದಗಿಸಲು ಸಾಧ್ಯವಿಲ್ಲ, ಹಾಗಾಗಿ ರಾಜಕೀಯ ನಿವೃತ್ತಿ: ಅಂಬರೀಷ್‌ ಸ್ಪಷ್ಟನೆ

Pinterest LinkedIn Tumblr

ಬೆಂಗಳೂರು: ಕಾಂಗ್ರೆಸ್‌ ಮುಖಂಡ, ರೆಬಲ್‌ ಸ್ಟಾರ್‌ ಎಂ.ಎಚ್‌.ಅಂಬರೀಷ್‌(66) ಚುನಾವಣಾ ರಾಜಕೀಯಕ್ಕೆ ಮಂಗಳವಾರ ನಿವೃತ್ತಿ ಘೋಷಿಸಿದ್ದಾರೆ.

ಮಂಡ್ಯದಿಂದ ಕಾಂಗ್ರೆಸ್‌ ಟಿಕೆಟ್‌ ದೊರೆತರೂ ಸ್ಪರ್ಧಿಸುವ ಸಂಬಂಧ ಸ್ಪಷ್ಟಪಡಿಸದೆ ಮೌನಿಯಾಗಿದ್ದ ಅಂಬರೀಷ್‌ ಚುನಾವಣಾ ರಾಜಕೀಯದಿಂದ ನಿವೃತ್ತಿ ಪಡೆಯುತ್ತಿರುವುದಾಗಿ ಹೇಳಿದ್ದಾರೆ.

‘ನಾನು ಚುನಾವಣೆಯಲ್ಲಿ ಗೆಲುವು ಸಾಧಿಸಿದರೂ ನನ್ನನ್ನು ಆಯ್ಕೆ ಮಾಡಿದ ಕ್ಷೇತ್ರದ ಜನರಿಗೆ ನ್ಯಾಯ ಒದಗಿಸಲು ಸಾಧ್ಯವಿಲ್ಲ. ಹಾಗಾಗಿ ರಾಜಕೀಯ ನಿವೃತ್ತಿ ಪಡೆಯಲು ನಿರ್ಧರಿಸಿದ್ದೇನೆ’ ಎಂದಿದ್ದಾರೆ.

ಈ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ಹೈಕಮಾಂಡ್, ಗಣಿಗ ಪಿ. ರವಿಕುಮಾರ್ ಗೌಡ ಅವರಿಗೆ ಮಂಡ್ಯದಿಂದ ‘ಬಿ’ ಫಾರಂ ವಿತರಿಸಿದೆ.

‘ನನಗೆ ವಯಸ್ಸಾಗಿದೆ. ನನಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಆಸಕ್ತಿಯಿಲ್ಲ. ಪಕ್ಷ ಮಂಡ್ಯದಿಂದ ಯಾವುದೇ ಅಭ್ಯರ್ಥಿಯನ್ನು ಕಣಕ್ಕಿಳಿಸಲಿ. ಅನಾರೋಗ್ಯದ ಕಾರಣ ನಾನು ಪ್ರಚಾರದಲ್ಲಿ ಭಾಗಿಯಾಗಲು ಸಾಧ್ಯವಿಲ್ಲ’ ಎಂದು ತಿಳಿಸಿದ್ದಾರೆ.

ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಿರುವ ಸಿಎಂ ಸಿದ್ದರಾಮಯ್ಯ ಅವರ ಕುರಿತಾದ ಪ್ರಶ್ನೆಗೆ ಪ್ರತಿಕ್ರಿಯಿಸಿ,‘ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸ್ಪರ್ಧಿಸುವುದಾಗಿ ಅವರು ಹೇಳುತ್ತಿದ್ದರು. ತನ್ನ ನಿಲುವಿಗೆ ತಾನು ಬದ್ಧರಾಗಿರಬೇಕಿತ್ತು. ರಾಜಕೀಯದಲ್ಲಿ ಸೋಲು–ಗೆಲುವು ಸಾಮಾನ್ಯ. ನಾಯಕನಾದವನು ಹೋರಾಡಲೇ ಬೇಕು’ ಎಂದಿದ್ದಾರೆ.

Comments are closed.