ಮಂಗಳೂರು, ಎಪ್ರಿಲ್.24: ದ.ಕ.ಜಿಲ್ಲೆಯ 8 ವಿಧಾನಸಭಾ ಕ್ಷೇತ್ರಗಳಲ್ಲಿ ಸೋಮವಾರ ವಿವಿಧ ಪಕ್ಷ ಮತ್ತು ಪಕ್ಷೇತರರ ಸಹಿತ ಒಂದೇ ದಿನ 26 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ. ಅದರಲ್ಲಿ ಕಾಂಗ್ರೆಸ್ 4, ಬಿಜೆಪಿ 6, ಜೆಡಿಎಸ್ 3, ಸಿಪಿಎಂ 2, ಎಸ್‌ಡಿಪಿಐ 1, ಬಿಎಸ್‌ಪಿ 1, ಪ್ರಜಾಪರಿವರ್ತನ ಪಾರ್ಟಿ 1, ಹಿಂದೂಸ್ತಾನ್ ಜನತಾಪಾರ್ಟಿ 1 ಹಾಗೂ ಪಕ್ಷೇತರರು 7 ಮಂದಿ ಸೇರಿದ್ದಾರೆ.
ಮಂಗಳೂರು ನಗರ ದಕ್ಷಿಣದಲ್ಲಿ ಕಾಂಗ್ರೆಸ್‌ನ ಜೆ.ಆರ್.ಲೋಬೊ, ಬಿಜೆಪಿಯ ವೇದವ್ಯಾಸ ಕಾಮತ್, ಸಿಪಿಎಂನ ಸುನೀಲ್ ಕುಮಾರ್ ಬಜಾಲ್, ಹಿಂದೂಸ್ತಾನ್ ಜನತಾ ಪಾರ್ಟಿಯ ಸುಪ್ರಿತ್ ಕುಮಾರ್ ಪೂಜಾರಿ, ಪಕ್ಷೇತರರಾದ ಮ್ಯಾಕ್ಸಿಪಿಂಟೋ, ರೀನಾ ಪಿಂಟೋ, ಮದನ್ ಎಂ.ಸಿ., ಆರ್.ಶ್ರೀಕರ ಪ್ರಭು ನಾಮಪತ್ರ ಸಲ್ಲಿಸಿದ್ದಾರೆ. ಮಂಗಳೂರು ನಗರ ಉತ್ತರದಲ್ಲಿ ಕಾಂಗ್ರೆಸ್‌ನ ಬಿ.ಎ.ಮೊಯ್ದಿನ್ ಬಾವ, ಬಿಜೆಪಿಯ ಡಾ. ವೈ. ಭರತ್ ಶೆಟ್ಟಿ, ಜೆಡಿಎಸ್‌ನ ಡಿ.ಪಿ.ಹಮ್ಮಬ್ಬ ನಾಮಪತ್ರ ಸಲ್ಲಿಸಿದ್ದಾರೆ.
ಮಂಗಳೂರು ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಸಚಿವ ಯು.ಟಿ.ಖಾದರ್, ಬಿಜೆಪಿಯ ಸಂತೋಷ್ ಕುಮಾರ್ ರೈ ಬೋಳಿಯಾರ್, ಬಂಟ್ವಾಳದಲ್ಲಿ ಎಸ್‌ಡಿಪಿಐಯ ಮುಹಮ್ಮದ್ ರಿಯಾಝ್, ಜೆಡಿಎಸ್‌ನ ಇಬ್ರಾಹೀಂ, ಪುತ್ತೂರಿನಲ್ಲಿ ಕಾಂಗ್ರೆಸ್‌ನ ಶಕುಂತಳಾ ಶೆಟ್ಟಿ, ಬಿಜೆಪಿಯ ಸಂಜೀವ ಮಠಂದೂರು, ಪಕ್ಷೇತರರಾದ ಶ್ರೀನಾಥಿ ವಿದ್ಯಾಶ್ರೀ, ಅಮರನಾಥ ಕೆ, ಪ್ರಜಾಪರಿವರ್ತನಾ ಪಾರ್ಟಿಯ ಶೇಖರ ಬಿ. ನಾಮಪತ್ರ ಸಲ್ಲಿಸಿದ್ದಾರೆ. ಸುಳ್ಯದಲ್ಲಿ ಬಹುಜನ ಪಾರ್ಟಿಯ ರಘು, ಪಕ್ಷೇತರ ಅಭ್ಯರ್ಥಿ ಚಂದ್ರಶೇಖರ ಕೆ. ನಾಮಪತ್ರ ಸಲ್ಲಿಸಿದ್ದಾರೆ.
ಬೆಳ್ತಂಗಡಿಯಲ್ಲಿ ಬಿಜೆಪಿಯ ಹರೀಶ್ ಪೂಂಜಾ, ಮೂಡುಬಿದಿರೆಯಲ್ಲಿ ಬಿಜೆಪಿಯ ಉಮಾನಾಥ ಕೋಟ್ಯಾನ್, ಜೆಡಿಎಸ್‌ನ ಜೀವನ್ ಕುಮಾರ್ ಶೆಟ್ಟಿ, ಸಿಪಿಎಂನ ಕೆ. ಯಾದವ ಶೆಟ್ಟಿ ನಾಮಪತ್ರ ಸಲ್ಲಿಸಿದ್ದಾರೆ.
ಆ ಪೈಕಿ ಹರೀಶ್ ಪೂಂಜಾ 2 ಪ್ರತಿ, ಉಮನಾಥ ಕೋಟ್ಯಾನ್ 4 ಪ್ರತಿ, ಜೀವನ್ ಕುಮಾರ್ ಶೆಟ್ಟಿ 2 ಪ್ರತಿ, ಜೆ.ಆರ್.ಲೋಬೊ 4 ಪ್ರತಿ, ವೇದವ್ಯಾಸ ಕಾಮತ್ 3 ಪ್ರತಿ, ಸಂತೋಷ್ ಕುಮಾರ್ ರೈ 3 ಪ್ರತಿ, ಯು.ಟಿ.ಖಾದರ್ 4 ಪ್ರತಿ, ಸಂಜೀವ ಮಠಂದೂರು 2 ಪ್ರತಿಯಲ್ಲಿ ನಾಮಪತ್ರ ಸಲ್ಲಿಸಿದ್ದಾರೆ.
Comments are closed.