ಮನೋರಂಜನೆ

ಹಿಟ್ ಆಂಡ್ ರನ್ ಪ್ರಕರಣ: ಸಲ್ಮಾಖ್ ಖಾನ್ ವಿರುದ್ಧದ ಬಂಧನ ವಾರಂಟ್ ರದ್ದು

Pinterest LinkedIn Tumblr


ಮುಂಬೈ: 2002ರ ಹಿಟ್ ಅಂಡ್ ರನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟ ಸಲ್ಮಾನ್ ಖಾನ್ ಅವರ ವಿರುದ್ಧ ಹೊರಡಿಸಿದ್ದ ಜಾಮೀನು ಸಹಿತ ಬಂಧನ ವಾರಂಟ್ ಅನ್ನು ಶನಿವಾರ ಮುಂಬೈ ಕೋರ್ಟ್ ರದ್ದಗೊಳಿಸಿದೆ.

ಈ ತಿಂಗಳ ಆರಂಭವದಲ್ಲಿ ಸುಪ್ರೀಂ ಕೋರ್ಟ್ ಆದೇಶದಂತೆ ಶ್ಯೂರಿಟಿ ನೀಡದ ಸಲ್ಮಾನ್ ಖಾನ್ ಅವರ ವಿರುದ್ಧ ಮುಂಬೈ ಕೋರ್ಟ್ ಬಂಧನ ವಾರಂಟ್ ಜಾರಿ ಮಾಡಿತ್ತು.

ಇಂದು ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಎಂಜಿ ದೇಶಪಾಂಡೆ ಅವರ ಮುಂದೆ ಹಾಜರಾದ್ ಸಲ್ಮಾನ್ ಖಾನ್, ಶ್ಯೂರಿಟಿ ಮತ್ತು ಇತರೆ ಕಾನೂನು ಪ್ರಕ್ರಿಯೆಗಳನ್ನು ಪೂರೈಸಿದರು. ಬಳಿಕ ಅವರ ವಿರುದ್ಧದ ಬಂಧನ ವಾರಂಟ್ ಅನ್ನು ರದ್ದುಪಡಿಸಲಾಯಿತು.

2002ರ ಗುದ್ದೋಡು ಪ್ರಕರಣದಲ್ಲಿ ಸೆಷನ್ಸ್ ನ್ಯಾಯಾಲಯ ಸಲ್ಮಾನ್ ಖಾನ್ ಗೆ 5 ವರ್ಷ ಜೈಲು ಶಿಕ್ಷೆಯನ್ನು ವಿಧಿಸಿ ತೀರ್ಪು ನೀಡಿತ್ತು. ಆದರೆ ಬಾಂಬೆ ಹೈಕೋರ್ಟ್ ತೀರ್ಪುನ್ನು ರದ್ದುಗೊಳಿಸಿ ಸಲ್ಮಾನ್ ಖಾನ್ ಅವರನ್ನು ಖುಲಾಸೆಗೊಳಿಸಿತ್ತು.

ಹೈಕೋರ್ಟ್ ತೀರ್ಪು ಪ್ರಶ್ನಿಸಿ ಮಹಾರಾಷ್ಟ್ರ ಸರ್ಕಾರ ಸುಪ್ರೀಂ ಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿದ್ದು, ಸಲ್ಮಾನ್ ಖಾನ್ ಜಾಮೀನಿನ ಮೇಲೆ ಹೊರಗಿದ್ದಾರೆ.

Comments are closed.