ರಾಷ್ಟ್ರೀಯ

ಮಗುವಿನ ಕತ್ತು ಸೀಳಿದ ತಾಯಿ: ತಾಂತ್ರಿಕನ ಪ್ರೇರಣೆಯ ಶಂಕೆ

Pinterest LinkedIn Tumblr


ಹೊಸದಿಲ್ಲಿ: ಮಾನಸಿಕ ಸಮಸ್ಯೆಯಿಂದ ಬಳಲುತ್ತಿರುವ 29 ಮಹಿಳೆಯೊಬ್ಬರು ತನ್ನ ಎಂಟು ತಿಂಗಳ ಮಗುವಿನ ಕತ್ತು ಸೀಳಿ, ಅಂಗಾಗಗಳನ್ನು ಕತ್ತರಿಸಿ ಚಿಂದಿ ಮಾಡಿದ ಬಳಿಕ ತಾನು ಆತ್ಮಹತ್ಯೆಗೆ ಪ್ರಯತ್ನಿಸಿರುವ ಘಟನೆಯು ದಿಲ್ಲಿ ಹೊರವಲಯದ ಅಮನ್‌ ವಿಹಾರ್‌ ಪ್ರದೇಶದಲ್ಲಿ ನಡೆದಿದೆ.

ಆರೋಪಿ ಮಹಿಳೆಯ ಪತಿ ಮನೆಗೆ ಬಂದಾಗ ಮಗುವಿನ ತಲೆ ಕತ್ತರಿಸಿ ,ಕತ್ತು ಸೀಳಿದ ಮೃತದೇಹವನ್ನು ಮಡಿಲಲ್ಲಿ ಇಟ್ಟುಕೊಂಡು ಆಕೆ ಕುಳಿತಿದ್ದರು.

ಆರೋಪಿ ಮಹಿಳೆ ಸಾರಿಕಾಗೆ ಮಾನಸಿಕ ಸಮಸ್ಯೆಯಿದ್ದು, ಕೆಲವು ವರ್ಷಗಳ ಹಿಂದೆ ಆಸ್ಪತ್ತೆಯಲ್ಲಿ ಚಿಕಿತ್ಸೆ ಕೂಡ ನೀಡಲಾಗಿತ್ತು. ನಾಳ್ಕು ವರ್ಷದ ಹಿಂದೆ ತನ್ನ ಎರಡು ತಿಂಗಳ ಮಗುವಿನ ಎದೆಯ ಮೇಲೆ ಕುಳಿತು ಅದನ್ನು ಸಾಯಿಸಿದ್ದರು ಎಂದು ತರಕಾರಿ ವ್ಯಾಪಾರಿಯಾಗಿರುವ ಪತಿ ಹರಿಶಂಕರ್‌ ತಿಳಿಸಿದ್ದಾರೆ.

ಸಾರಿಕಾ ತಾಂತ್ರಿಕನನ್ನು ಭೇಟಿ ಮಾಡಿದ್ದು, ಆತನ ನಿರ್ದೇಶನದಂತೆ ಇಂತಹ ಕ್ರೂರ ಕೃತ್ಯ ಎಸಗಿರಬಹುದು ಎಂದು ಪೋಷಕರು ಹೇಳಿದ್ದಾರೆ.

ಗುರುವಾರ ರಾತ್ರಿ ಹರಿಶಂಕರ್‌ ಮನೆಗೆ ಬಂದಿದ್ದು, ಆಗ ಮನೆಗೆ ಒಳಗಿನಿಂದ ಚಿಲಕ ಹಾಕಲಾಗಿತ್ತು. ಸ್ವಲ್ಪ ಹೊತ್ತು ಪತ್ನಿಯನ್ನು ಕರೆದರೂ ಆಕೆ ಬರದಿದ್ದಾಗ ಅವರು ಹತ್ತಿರದಲ್ಲಿರುವ ಪೋಷಕರ ಮನೆಗೆ ಹೋಗಿದ್ದರು. ಮರು ದಿನ ಬೆಳಗ್ಗೆ ಬಂದು ಬಾಗಿಲು ಬಡಿದರೂ ಪತ್ನಿ ಪ್ರತಿಕ್ರಿಯಿಸದಿದ್ದಾಗ ಹರಿಶಂಕರ್‌ ಗೋಡೆ ಏರಿ ಮನೆಯೊಳಗೆ ನೋಡಿದರೆ ಪತ್ನಿ ಛಿದ್ರಗೊಂಡ ಮಗು ಚಿರಾಗ್‌ ಶವವನ್ನು ಮಡಿಲಲ್ಲಿ ಇರಿಸಿಕೊಂಡಿದ್ದರು. ಜತೆಗೆ ಆಕೆ ತನ್ನ ಹೊಟ್ಟೆಗೆ ಹಲವು ಬಾರಿ ತಿವಿದುಕೊಂಡು ಗಾಯಗೊಂಡಿದ್ದರು. ತಕ್ಷಣ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಸಾರಿಕಾ ತನ್ನ ಮಕ್ಕಳ ವಿಚಾರ ಹೊರತುಪಡಿಸಿ ಕುಟುಂಬದ ಇತರ ಎಲ್ಲರ ಜತೆ ಚೆನ್ನಾಗಿಯೇ ಇದ್ದಾರೆ. ಹೀಗಾಗಿ ಇಬ್ಬರು ಪುತ್ರಿಯರನ್ನು ಹರಿಶಂಕರ್‌ ತನ್ನ ಪೋಷಕರ ಬಳಿಯೇ ಬಿಟ್ಟಿದ್ದಾರೆ.

Comments are closed.