ಮನೋರಂಜನೆ

ಬಿಜೆಪಿ ಹೊಡೆತಕ್ಕೆ ಹೆಸರು ಬದಲಾಯಿಸಿಕೊಂಡ ಖುಷ್ಬೂ

Pinterest LinkedIn Tumblr


ಜನಪ್ರಿಯ ತಾರೆ, ಕಾಂಗ್ರೆಸ್ ವಕ್ತಾರೆ ಖುಷ್ಬೂ ಸುಂದರ್ ತನ್ನ ಹೆಸರನ್ನು ಬದಲಾಯಿಸಿಕೊಂಡಿದ್ದಾರೆ. ಅವರ ನಿಜವಾದ ಹೆಸರು ಖುಷ್ಬೂ ಅಲ್ಲ ಎಂಬ ವಿಷಯ ಕೆಲವರಿಗೆ ಗೊತ್ತೇ ಇರುತ್ತದೆ. ಕರಿಯರ್ ಆರಂಭದಲ್ಲಿ ತಮ್ಮ ಹೆಸರನ್ನು ಬದಲಾಯಿಸಿಕೊಂಡು ಖುಷ್ಬೂ ಎಂದು ಚಿತ್ರರಂಗಕ್ಕೆ ಪರಿಚಿತರಾಗಿದ್ದರು. ಆದರೆ ಅವರ ನಿಜವಾದ ಹೆಸರು ನಖಟ್ ಖಾನ್ ಎಂಬ ವಿಷಯವನ್ನು ಪ್ರಸ್ತಾಪಿಸಿದ ಬಿಜೆಪಿ ರಾಜಕೀಯ ದಾಳಿ ಪ್ರಾರಭಿಸಿತು.

‘ಖುಷ್ಬೂ ತಮ್ಮ ಗುರುತನ್ನು ಮರೆಮಾಚುತ್ತಿದ್ದಾರೆ. ಅವರು ತಮ್ಮ ಧರ್ಮವನ್ನು ಕೀಳಾಗಿ ನೋಡುತ್ತಿದ್ದಾರೆ. ಹೆಸರನ್ನು ಮುಚ್ಚಿಡುತ್ತಿದ್ದಾರೆ. ಈ ಬಗ್ಗೆ ಅವರು ಸ್ಪಷ್ಟೀಕರಣ ನೀಡಬೇಕು’ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಅಭಿಯಾನವನ್ನೇ ಆರಂಭಿಸಿತು. ವಿಶೇಷ ಎಂದರೆ ಖುಷ್ಬೂ ಅವರಿಗೆ ಟ್ವಿಟರ್‌ನಲ್ಲಿ ಬಹಳಷ್ಟು ಮಂದಿ ಬೆಂಬಲ ಸೂಚಿಸಿದ್ದರು.
ಖುಷ್ಬೂ

ಆದರೂ ಖುಷ್ಬೂ ಮಾತ್ರ ತನ್ನ ಹೆಸರನ್ನು ಟ್ವಿಟರ್‌ನಲ್ಲಿ ಬದಲಾಯಿಸಿಕೊಂಡರು. ‘ಖುಷ್ಬೂ ಸುಂದರ್… ಬಿಜೆಪಿಗಾಗಿ ನಖಟ್ ಖಾನ್’ ಎಂದು ಟ್ವಿಟರ್ ಹ್ಯಾಡಲನ್ನು ಬದಲಾಯಿಸಿಕೊಂಡಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಅವರು, ‘ಸಮಸ್ಯೆಗಳನ್ನು ಪರಿಹರಿಸಬೇಕಾದ ನೇತಾರರು, ಬೇರೆಯವರ ವೈಯಕ್ತಿಕ ಜೀವನದಲ್ಲಿ ಇಣುಕಿ ನೋಡುತ್ತಾ ಚಿಲ್ಲರೆ ರಾಜಕೀಯ ಮಾಡುತ್ತಿದ್ದಾರೆ. ನಖಟ್ ನನ್ನ ತಂದೆತಾಯಿ ಇಟ್ಟ ಹೆಸರು. ಧರ್ಮದ ಜತೆಗೆ ರಾಜಕೀಯ ಬೆರೆಸುವುದು ಬಿಜೆಪಿಯವರಿಗೆ ಅಭ್ಯಾಸವಾಗಿದೆ. ಅವರಿಗೆ ಬುದ್ಧಿ ಕಲಿಸಲು ಹೆಸರು ಬದಲಾಯಿಸಿಕೊಂಡಿದ್ದೇನೆ’ ಎಂದಿದ್ದಾರೆ.

Comments are closed.