ಮನೋರಂಜನೆ

ರಮೇಶ್ ಅರವಿಂದ್ ನಿರೂಪಣೆಯಲ್ಲಿ ‘ಕನ್ನಡದ ಕೋಟ್ಯಧಿಪತಿ’?

Pinterest LinkedIn Tumblr


ನಟ, ನಿರ್ದೇಶಕ ರಮೇಶ್ ಅರವಿಂದ್ ಮತ್ತೆ ಕಿರುತೆರೆಗೆ ವಾಪಸ್ ಆಗುತ್ತಿದ್ದಾರೆ. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಡೆಸಿಕೊಡುತ್ತಿದ್ದ ಜನಪ್ರಿಯ ಗೇಮ್ ಶೋ ‘ಕನ್ನಡದ ಕೋಟ್ಯಧಿಪತಿ’ ಕಾರ್ಯಕ್ರಮವನ್ನು ರಮೇಶ್ ನಿರೂಪಿಸಲಿದ್ದಾರೆ ಎನ್ನುತ್ತಿವೆ ಮೂಲಗಳು.

ಬಿಗ್ ಬಿ ಅಮಿತಾಬ್ ಬಚ್ಚನ್ ಹಿಂದಿಯಲ್ಲಿ ಇದೇ ಗೇಮ್ ಶೋವನ್ನು ‘ಕೌನ್ ಬನೇಗಾ ಕರೋಡ್‌ಪತಿ’ ಹೆಸರಿನಲ್ಲಿ ನಿರೂಪಿಸಿದ್ದಾರೆ. ಲಕ್ಷಾಂತರ ಅಭಿಮಾನಿಗಳ ಹೃದಯ ಗೆದ್ದಂತಹ ಕಾರ್ಯಕ್ರಮ ಇದು.

ಆರಂಭದಲ್ಲಿ ವಾಹಿನಿ ರಾಕಿಂಗ್ ಸ್ಟಾರ್ ಯಶ್‌ರನ್ನು ನಿರೂಪಕರಾಗಿ ಕರೆತರಲು ಸಿದ್ಧತೆ ನಡೆಸಲಾಗಿದ್ದು. ಅಂತಿಮವಾಗಿ ರಮೇಶ್ ಅರವಿಂದ್ ಶೋ ನಿರೂಪಕರಾಗಿ ಆಯ್ಕೆ ಮಾಡಲಾಗಿದೆ ಎನ್ನಲಾಗಿದೆ. ಈ ಹಿಂದೆ ರಮೇಶ್ ಅವರು ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದ ಮೂಲಕ ಹಲವಾರು ಪ್ರತಿಭೆಗಳ ಸಾಧನೆಯ ಹಾದಿಯನ್ನು ವೀಕ್ಷಕರ ಮುಂದೆ ತೆರೆದಿಟ್ಟಿದ್ದರು.

ಆ ಕಾರ್ಯಕ್ರಮದಲ್ಲಿ ಪುನೀತ್ ರಾಜ್ ಕುಮಾರ್, ಸುದೀಪ್, ಉಪೇಂದ್ರ, ಯಶ್, ಅಂಬರೀಶ್, ಶಿವರಾಜ್ ಕುಮಾರ್, ದರ್ಶನ್ ಸೇರಿದಂತೆ ಹಲವಾರು ತಾರೆಗಳು ಭಾಗವಹಿಸಿದ್ದರು. ಹೆಚ್ ಡಿ ಕುಮಾರಸ್ವಾಮಿ ಮತ್ತು ಸಿದ್ಧರಾಮಯ್ಯ ಸಹ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ತಮ್ಮ ಸಾಧನೆಯನ್ನು ಮೆಲುಕು ಹಾಕಿದ್ದರು. ಇನ್ನು ಕನ್ನಡದ ಕೋಟ್ಯಧಿಪತಿ ಕಾರ್ಯಕ್ರಮ ಯಾವಾಗ ಪ್ರಸಾರವಾಗಲಿದೆ ಎಂಬ ಬಗ್ಗೆ ವಾಹಿನಿ ಇನ್ನೂ ವಿವರಗಳನ್ನು ಪ್ರಕಟಿಸಿಲ್ಲ.

Comments are closed.