ರಾಷ್ಟ್ರೀಯ

ನರೋಡ ಪಾಟಿಯಾ: ಬಿಜೆಪಿಯ ಕೊದ್ನಾನಿ ಖುಲಾಸೆ; ಬಜರಂಗಿ ಅಪರಾಧಿ

Pinterest LinkedIn Tumblr


ಅಹ್ಮದಾಬಾದ್‌: ಗುಜರಾತ್‌ನ ನರೋಡಾ ಪಾಟಿಯಾ ಕೇಸ್‌ನಲ್ಲಿ ಗುಜರಾತ್‌ ಹೈಕೋರ್ಟ್‌ ಇಂದು ಶುಕ್ರವಾರ ಭಾರತೀಯ ಜನತಾ ಪಕ್ಷದ ನಾಯಕಿ ಮಾಯಾ ಕೊದ್ನಾನಿ ಅವರನ್ನು ಖುಲಾಸೆಗೊಳಿಸಿದೆ; ಆದರೆ ಬಜರಂಗ ದಳ ನಾಯಕ ಬಾಬು ಬಜರಂಗಿ ಅವರು ಅಪರಾಧಿ ಎಂಬ ತೀರ್ಪನ್ನು ಎತ್ತಿ ಹಿಡಿದಿದೆ.

ಕೊದ್ನಾನಿ ಮಾತ್ರವಲ್ಲದೆ ನರೋಡಾ ಪಾಟಿಯಾ ದೊಂಬಿ ಪ್ರಕರಣದ ಗಣಪತ್‌ ಛಾರಾ ಮತ್ತು ಹರೀಶ್‌ ಛಾರಾ ಅವರನ್ನು ಎಲ್ಲ ಆರೋಪಗಳಿಂದ ಗುಜರಾತ್‌ ಹೈಕೋರ್ಟ್‌ ಖುಲಾಸೆ ಗೊಳಿಸಿದೆ.

2002ರ ಫೆ.27ರಂದು ಗೋದ್ರಾ ಸ್ಟೇಶನ್‌ನಲ್ಲಿ ಸಾಬರ್‌ಮತಿ ಎಕ್ಸ್‌ಪ್ರೆಸ್‌ ರೈಲಿನ ಎಸ್‌-6 ಕೋಚ್‌ಗೆ ಬೆಂಕಿ ಹಾಕಲಾದುದನ್ನು ಅನಸರಿಸಿ ನಡೆದಿದ್ದ ನರೋಡಾ ಪಾಟಿಯಾ ನರಮೇಧದಲ್ಲಿ ಕನಿಷ್ಠ 97 ಮುಸ್ಲಿಮರನ್ನು ಹತ್ಯೆಗೈಯಲಾಗಿತ್ತು. ಸಾಬರ್‌ಮತಿ ಎಕ್ಸ್‌ಪ್ರೆಸ್‌ ರೈಲಿನ ಬೆಂಕಿಗೆ 58 ಹಿಂದೂ ಕರಸೇವಕರು ಸುಟ್ಟು ಕರಕಲಾಗಿದ್ದರು.

ನರೋಡಾ ಪಾಟಿಯಾ ನರಮೇಧದ ಕೇಸಿನ ವಿಚಾರಣೆಯನ್ನು ಜಸ್ಟಿಸ್‌ ಹರ್ಷ ದೇವಾನಿ ಮತ್ತು ಜಸ್ಟಿಸ್‌ ಎ ಎಸ್‌ ಸುಪೇಹಿಯಾ ಅವರನ್ನು ಒಳಗೊಂಡು ಇಬ್ಬರು ನ್ಯಾಯಾಧೀಶರ ಪೀಠವು 2017ರ ಆಗಸ್ಟ್‌ನಲ್ಲಿ ವಿಚಾರಣೆಯನ್ನು ಮುಗಿಸಿ ಆದೇಶವನ್ನು ಕಾಯ್ದಿರಿಸಿತ್ತು.

-ಉದಯವಾಣಿ

Comments are closed.