ಸುಮಾರು 21 ವರ್ಷಗಳ ಬಳಿಕ ನಟ ಸಂಜಯ್ ದತ್ ಮತ್ತು ಮಧುರಿ ದೀಕ್ಷಿತ್ ಜತೆಯಾಗಿ ಅಭಿನಯಿಸಲಿದ್ದಾರೆ. ಕರಣ್ ಜೋಹರ್ ನಿರ್ಮಿಸಲಿರುವ ‘ಕಳಂಕ್’ ಚಿತ್ರದಲ್ಲಿ ಇವರಿಬ್ಬರೂ ಅಭಿನಯಿಸಲಿದ್ದಾರೆ. ಅಂದಹಾಗೆ ಇದೊಂದು ಎಪಿಕ್ ಡ್ರಾಮಾ ಎಂದಿದ್ದಾರೆ ಕರಣ್.
ಚಿತ್ರಕ್ಕೆ ಅಭಿಷೇಕ್ ವರ್ಮನ್ ಆಕ್ಷನ್ ಕಟ್ ಹೇಳುತ್ತಿದ್ದು ಪಾತ್ರವರ್ಗದಲ್ಲಿ ಆಲಿಯಾ ಭಟ್, ವರುಣ್ ಧವನ್, ಸೋನಾಕ್ಷಿ ಸಿನ್ಹಾ ಮತ್ತು ಆದಿತ್ಯ ರಾಯ್ ಕಪೂರ್ ಇರುತ್ತಾರೆ. ಇದೇ ಚಿತ್ರಕ್ಕೆ ‘ಸಿದ್ಧತ್’ ಎಂದು ಹೆಸರಿಡಲಾಗಿದೆ ಎಂಬ ಸುದ್ದಿ ಇತ್ತು. ಆದರೆ ತಮ್ಮ ಸಿನಿಮಾ ಶೀರ್ಷಿಕೆ ಅದಲ್ಲ. ಶೀಘ್ರದಲ್ಲೇ ಪ್ರಕಟಿಸುವುದಾಗಿ ಕರಣ್ ಜೋಹರ್ ಹೇಳಿದ್ದರು. ಈಗ ಚಿತ್ರದ ಟೈಟಲ್ ‘ಕಳಂಕ್’ ಎಂದು ಪ್ರಕಟಿಸಿದ್ದಾರೆ.
ಸಂಜಯ್ ದತ್ ಮತ್ತು ಮಾಧುರಿ ದೀಕ್ಷಿತ್ ತೊಂಬತ್ತರ ದಶಕದಲ್ಲಿ ಮೋಡಿ ಮಾಡಿದ ಜೋಡಿ. ಸಾಜನ್, ಖಳನಾಯಕ್ ಮತ್ತು ಮಹಾಂತ ಚಿತ್ರಗಳಲ್ಲಿ ಈ ತಾರಾಜೋಡಿ ಅಭಿನಯಿಸಿದೆ. ಈಗ ಸಂಜಯ್ ದತ್‌ಗೆ 58 ವರ್ಷಗಳಾಗಿದ್ದರೆ ಮಾಧುರಿ ಅವರಿಗೆ 50 ಆಗಿದೆ. 1993ರ ಮುಂಬೈ ಸ್ಫೋಟ ಪ್ರಕರಣದಲ್ಲಿ ಸಂಜಯ್ ದತ್ ಜೈಲು ಸೇರಿದ ಬಳಿಕ ಇವರಿಬ್ಬರ ಸಿನಿಮಾಗಳಿಗೆ ಬ್ರೇಕ್ ಬಿತ್ತು.
ಆರಂಭದಲ್ಲಿ ಈ ಚಿತ್ರಕ್ಕೆ ದಿವಂಗತ ಶ್ರೀದೇವಿ ನಾಯಕಿ ಎಂದುಕೊಳ್ಳಲಾಗಿತ್ತು. ಆದರೆ ಅವರ ಅಕಾಲಿಕ ನಿಧನದಿಂದ ಆ ಪಾತ್ರ ಮಾಧುರಿ ದೀಕ್ಷಿತ್ ಅವರಿಗೆ ಒಲಿಯಿತು. ಈ ಬಗ್ಗೆ ಶ್ರೀದೇವಿ ಪುತ್ರಿ ಜಾಹ್ನವಿ ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ತಾಯಿ ಪೋಷಿಸಬೇಕಾಗಿದ್ದ ಪಾತ್ರದಲ್ಲಿ ಮಾಧುರಿ ದೀಕ್ಷಿತ್ ಅಭಿನಯಿಸುತ್ತಿರುವುದು ಸಂತಸ ತಂದಿದೆ ಎಂದಿದ್ದರು.
Comments are closed.