ಮನೋರಂಜನೆ

ನಾಗಾಭರಣರ “ಕಾನೂರಾಯಣ’ ಎಲೆಕ್ಷನ್ ಸಾಂಗ್ ವೈರಲ್

Pinterest LinkedIn Tumblr


ಶ್ರುತಾಲಯ ಫಿಲಂಸ್ ನಿರ್ಮಾಣದಲ್ಲಿ ಮೂಡಿಬಂದಿರುವ, ಖ್ಯಾತ ನಿರ್ದೇಶಕ ಟಿ.ಎಸ್. ನಾಗಾಭರಣ ನಿರ್ದೇಶಿಸಿರುವ, “ಕಾನೂರಾಯಣ’ ಚಿತ್ರದ ಎಲೆಕ್ಷನ್ ಗೀತೆಯೊಂದನ್ನು ಚಿತ್ರತಂಡ ಇತ್ತೀಚೆಗಷ್ಟೇ ಬಿಡುಗಡೆ ಮಾಡಿದೆ. ಈ ಚುನಾವಣಾ ಗೀತೆ ಈಗ ವೈರಲ್ ಆಗುತ್ತಿದೆ.

ಚಿತ್ರಕತೆಯಲ್ಲಿ ಬರುವ ಗ್ರಾಮ ಪಂಚಾಯತ್ ಚುನಾವಣಾ ಪ್ರಚಾರಕ್ಕಾಗಿ ಸೃಷ್ಟಿಸಿರುವ ಈ ಹಾಡು, ಪ್ರಸ್ತುತ ಸನ್ನಿವೇಶಕ್ಕೆ ಬಹಳ ಹತ್ತಿರದಲ್ಲಿದ್ದು ಭಾರೀ ಜನಪ್ರಿಯತೆ ಪಡೆಯುತ್ತಿದೆ. ಇನ್ನು ಈ ಚಿತ್ರಕ್ಕೆ ಹರೀಶ್‌ ಹಾಗಲವಾಡಿ ಕಥೆ ಬರೆದರೆ, ನಾಗಾಭರಣ ಮತ್ತು ಪನ್ನಗಾಭರಣ ಚಿತ್ರಕಥೆ ರಚಿಸಿದ್ದಾರೆ.

ಚಿತ್ರದಲ್ಲಿ ಸ್ಕಂದ ಅಶೋಕ್‌, ಸೋನು ಗೌಡ, ದೊಡ್ಡಣ್ಣ, ಕರಿಸುಬ್ಬು, ಸುಂದರ್‌ರಾಜ್‌, ಗಿರಿಜಾ ಲೋಕೇಶ್‌, ನೀನಾಸಂ ಅಶ್ವತ್ಥ್ ಮುಂತಾದವರು ನಟಿಸಿದ್ದು, ವಾಸುಕಿ ವೈಭವ್‌ ಸಂಗೀತ ಸಂಯೋಜಿಸಿದ್ದಾರೆ. ಈ ಹಾಡನ್ನೊಮ್ಮೆ ನೀವೂ ನೋಡಿ ಆನಂದಿಸಿ…

-ಉದಯವಾಣಿ

Comments are closed.