ರಾಷ್ಟ್ರೀಯ

ತೇಜ್‌ ಪ್ರತಾಪ್‌-ಐಶ್ವರ್ಯಾ ರಾಯ್ ಅದ್ಧೂರಿ ನಿಶ್ಚಿತಾರ್ಥ

Pinterest LinkedIn Tumblr


ಪಟನಾ: ಬಿಹಾರ ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್‌ ಯಾದವ್‌ ಪುತ್ರ ತೇಜ್‌ ಪ್ರತಾಪ್‌ ಯಾದವ್‌ ಹಾಗೂ ಬಿಹಾರದ ಮಾಜಿ ಸಚಿವರ ಚಂದ್ರಿಕಾ ಪ್ರಸಾದ್‌ ರೈ ಪುತ್ರಿ ಐಶ್ವರ್ಯ ರೈ ನಿಶ್ಚಿತಾರ್ಥ ಬುಧವಾರ ಪಟನಾದ ಖಾಸಗಿ ಹೋಟೆಲ್‌ನಲ್ಲಿ ಅದ್ಧೂರಿಯಾಗಿ ನೆರವೇರಿತು.

ಎರಡೂ ಕುಟುಂಬದ ಸದಸ್ಯರು ಸಮಾರಂಭದಲ್ಲಿ ಭಾಗವಹಿಸಿದ್ದರು, ಆದರೆ ಲಾಲು ಪ್ರಸಾದ್‌ ಯಾದವ್‌ ಜೈಲಿನಲ್ಲಿರುವ ಕಾರಣ ಕಾರ್ಯಕ್ರಮಕ್ಕೆ ಹಾಜರಾಗಲಿಲ್ಲ.

ಸುಮಾರು 200 ಮಂದಿ ಸಮ್ಮುಖದಲ್ಲಿ ತೇಜ್‌ ಪ್ರತಾಪ್‌ ಮತ್ತು ಐಶ್ವರ್ಯಾ ರೈ ಪರಸ್ಪರ ಉಂಗುರ ಬದಲಾಯಿಸಿಕೊಂಡರು. ಮೇ 12 ರಂದು ಪಟನಾದ ಪಶು ವೈದ್ಯಕೀಯ ಕಾಲೇಜಿನ ಮೈದಾನದಲ್ಲಿ ಇಬ್ಬರ ವಿವಾಹ ಮಹೋತ್ಸವ ನಡೆಯಲಿದೆ. ದಿಲ್ಲಿ, ಕೋಲ್ಕೊತಾ ಮತ್ತು ಬೆಂಗಳೂರಿನಿಂದ ತರಿಸಲಾದ ಹೂವುಗಳಿಂದ ಹೋಟೆಲ್‌ ಅನ್ನು ಸಿಂಗರಿಸಿದ್ದು ವಿಶೇಷವಾಗಿತ್ತು.

Comments are closed.