ಕರ್ನಾಟಕ

ಬಸವೇಶ್ವರ ಜಯಂತಿ: ಗುರಿ ತಪ್ಪಿ ಕೆಳಗೆ ಬಿದ್ದ ಶಾ ಹಾಕಿದ ಹಾರ!

Pinterest LinkedIn Tumblr


ಬೆಂಗಳೂರು: ಇಲ್ಲಿನ ಬಸವೇಶ್ವರ ಸರ್ಕಲ್‌ನಲ್ಲಿ ಬಸವ ಜಯಂತಿಯ ದಿನದಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್‌ ಶಾ ಅವರು ಮುಜುಗರ ಅನುಭವಿಸಬೇಕಾದ ಪರಿಸ್ಥಿತಿ ನಿರ್ಮಾಣವಾಯಿತು.

ಬಸವೇಶ್ವರರ ಬೃಹತ್‌ ಪ್ರತಿಮೆಗೆ ಮಾಲಾರ್ಪಣೆ ಮಾಡಲು ಕ್ರೇನ್‌ನಲ್ಲಿ ಯಡಿಯೂರಪ್ಪ ಮತ್ತು ಅಮಿತ್‌ ಶಾ ಅವರು ಮೇಲೇರಿದ್ದರು. ಈ ವೇಳೆ ಅಮಿತ್‌ ಶಾ ಅವರು ಹಾಕಿದ ಹಾರ ಕೆಳಗೆ ಬಿತ್ತು. ಬೀಳುತ್ತಿದ್ದ ಹಾರವನ್ನು ಹಿಡಿಯಲು ಯತ್ನಿಸಿದರೂ ಸಾಧ್ಯವಾಗಲಿಲ್ಲ. ಆ ಬಳಿಕ ಯಡಿಯೂರಪ್ಪ ಅವರು ಗುರಿ ಮಾಡಿ ಹಾಕಿದ ಹಾರ ಬಸವೇಶ್ವರ ಪ್ರತಿಮೆಗೆ ಬಿತ್ತು. ಕೂಡಲೆ ಶಾ ಅವರು ಯಡಿಯೂರಪ್ಪ ಅವರನ್ನು ನೋಡಿ ಮುಗುಳ್ನಕ್ಕರು. ಬಿಜೆಪಿ ಕಾರ್ಯಕರ್ತರು ಚಪ್ಪಾಳೆ ಸಿಳ್ಳೆ ಹೊಡೆದರು.

ಪ್ರತಿಭಟನೆ ಹಲವರು ವಶಕ್ಕೆ

ಪ್ರತ್ಯೇಕ ಲಿಂಗಾಯತ ಧರ್ಮದ ಮಾನ್ಯತೆ ವಿಚಾರದಲ್ಲಿ ನಿಲುವು ಸ್ಪಷ್ಟ ಪಡಿಸಲು ಆಗ್ರಹಿಸಿ ಲಿಂಗಾಯತ ಮಹಾಸಭಾದ ಕೆಲ ಕಾರ್ಯಕರ್ತರು ಶಾ ವಿರುದ್ಧ ಪ್ರತಿಭಟನೆಗೆ ಮುಂದಾಗಿದ್ದರು. ಹಲವರನ್ನು ಪೊಲೀಸರು ವಶಕ್ಕೆ ಪಡೆದು ಪ್ರತಿಭಟನೆಯನ್ನು ಹತ್ತಿಕ್ಕಿದರು.

-ಉದಯವಾಣಿ

Comments are closed.