ಮನೋರಂಜನೆ

ಹಳೆಯ ದಿನಗಳನ್ನು ಮೆಲುಕು ಹಾಕಿದ ನವರಸನಾಯಕ “ಜಗ್ಗೇಶ್’

Pinterest LinkedIn Tumblr


ಸಾಮಾಜಿಕ ಜಾಲತಾಣಗಳಲ್ಲಿ ಸದಾ ಸಕ್ರಿಯರಾಗಿರುವ ನವರಸನಾಯಕ ಜಗ್ಗೇಶ್ ಅವರು ಇಂದು ಆ ಹಳೆಯ ದಿನಗಳನ್ನು ನೆನೆಪಿಸಿಕೊಂಡರೆ ಇದೀಗ ನನಗೆ ಕಣ್ಣೀರು ಬರುತ್ತದೆ ಅಂತ ಟ್ವೀಟ್ ಮಾಡಿದ್ದಾರೆ. ಟ್ವಿಟ್ಟರ್ ನಲ್ಲಿ ನಟ ಸುದೀಪ್ ಅಭಿಮಾನಿಯೊಬ್ಬರು, ಅಂಬರೀಶ್, ರವಿಚಂದ್ರನ್, ಜಗ್ಗೇಶ್ ಹಾಗೂ ವಿಷ್ಣುವರ್ಧನ್ ಜೊತೆಯಲ್ಲಿರೋ ಹಳೆಯ ಫೋಟೋವೊಂದನ್ನು ಟ್ಯಾಗ್ ಮಾಡಿದ್ದರು.

ಇದಕ್ಕೆ ಪ್ರತಿಕ್ರಿಯಿಸಿದ ಜಗ್ಗೇಶ್, ಮೂವರು ನನ್ನ ಛೇಡಿಸುತ್ತಿರುವುದು..!, ಅಂಬರೀಶ್ ರವರು ನಾನೇ ಜಾಸ್ತಿ ಕರಿಯ ಎಂದು.. ನಾನು ಇಲ್ಲಾ ನೀವೆ ಎಂದು.. ಆಗ ಅಂಬರೀಶ್ ಬಿಚ್ಚೋ ಶರ್ಟು ನೋಡೇಬಿಡೋಣ ಎಂದಾಗ ನಾನು ಇದು ಪಬ್ಲಿಕ್ ಅಂತ ಹೇಳಿದೆ. ಈ ವೇಳೆ ಎಲ್ಲರು ಬಿಚ್ಚು ನೋಡಣ ಎಂದಾಗಿನ ಚಿತ್ರವಾಗಿದೆ. ಆ ದಿನ ನೆನೆದರೆ ಈಗ ಕಣ್ಣೀರು ಬರುತ್ತದೆ. ಎಂಥ ಅದ್ಭುತ ಸಂತೋಷದ ದಿನಗಳು.

ಇಂದು ಆ ಸಂತೋಷವೆಲ್ಲಾ ಇಲ್ಲ ಎಂದು ತಮ್ಮ ಹಳೆಯ ದಿನಗಳನ್ನು ಮೆಲುಕು ಹಾಕಿದ್ದಾರೆ. ಇನ್ನು ಜಗ್ಗೇಶ್ “ಪ್ರೀಮಿಯರ್ ಪದ್ಮಿನಿ’ ಚಿತ್ರದಲ್ಲಿ ನಟಿಸುತ್ತಿದ್ದು, ಈಗಾಗಲೇ ಚಿತ್ರದ ಫಸ್ಟ್ ಲುಕ್ ಬಿಡುಗಡೆಯಾಗಿದೆ. ಈ ಚಿತ್ರವನ್ನು ಶೃತಿನಾಯ್ಡು ನಿರ್ಮಾಣದಲ್ಲಿ ರಮೇಶ್ ಚಂದ್ರ ನಿರ್ದೇಶಿಸುತ್ತಿದ್ದು, ಮಧುಬಾಲ ಕೂಡ ಈ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

-ಉದಯವಾಣಿ

Comments are closed.