ಮನೋರಂಜನೆ

ತೆಲುಗು ಯು ಟರ್ನ್‌ನಲ್ಲಿ ಭೂಮಿಕಾ ಚಾವ್ಲಾ

Pinterest LinkedIn Tumblr


ಪವನ್‌ಕುಮಾರ್‌ ನಿರ್ದೇಶನದ ಯು ಟರ್ನ್‌ ಚಿತ್ರತೆಲುಗಿಗೆ ರಿಮೇಕ್‌ ಆಗುತ್ತಿರುವುದು ಗೊತ್ತಿರುವ ವಿಚಾರ. ಕನ್ನಡದಲ್ಲಿ ಶ್ರದ್ಧಾ ಶ್ರೀನಾಥ್‌ ಮಾಡಿದ ಪಾತ್ರವನ್ನು ಸಮಂತಾ ತೆಲುಗಿನಲ್ಲಿ ಮಾಡುತ್ತಿದ್ದಾರೆ. ರಾಧಿಕಾ ಚೇತನ್‌ ಪಾತ್ರಕ್ಕೆ ಯಾರು ಸಲೆಕ್ಟ್ ಆಗುತ್ತಾರೆ ಎಂಬ ಪ್ರಶ್ನೆ ಎದ್ದಿತ್ತು, ಈಗ ಆ ಪಾತ್ರಕ್ಕೆ ಬಹುಭಾಷಾ ನಟಿ ಭೂಮಿಕಾ ಚಾವ್ಲಾ ಆಯ್ಕೆಯಾಗಿದ್ದಾರೆ.

ಭೂಮಿಕಾ ಒಂದು ಕಾಲದಲ್ಲಿ ತೆಲುಗಿನ ಬಿಝಿ ನಟಿ, ವಿವಾಹವಾದ ನಂತರ ಚಿತ್ರರಂಗದಿಂದ ದೂರವಾಗಿದ್ದ ಅವರು ಅಲ್ಲೊಂದು ಇಲ್ಲೊಂದು ಪಾತ್ರಗಳನ್ನು ಮಾತ್ರ ನಿರ್ವಹಿಸುತ್ತಿದ್ದರು. ಪವನ್‌ಕುಮಾರ್‌ ನಿರ್ದೇಶನದ ಯು ಟರ್ನ್‌ ಚಿತ್ರವನ್ನು ಕನ್ನಡದಲ್ಲಿ ನೋಡಿದ್ದಾಗಲೇ ಭೂಮಿಕಾ ಮೆಚ್ಚಿಕೊಂಡಿದ್ದರು. ಆ ಚಿತ್ರದಲ್ಲಿ ರಾಧಿಕಾ ಚೇತನ್‌ ನಿರ್ವಹಿಸಿದ್ದ ಪಾತ್ರವನ್ನು ಒಪ್ಪಿಕೊಂಡಿರುವ ಅವರು ಶೂಟಿಂಗ್‌ನಲ್ಲಿಯೂ ಪಾಲ್ಗೊಂಡಿದ್ದಾರೆ. ಇದೇ ಸಮಯದಲ್ಲಿ ಚಿತ್ರತಂಡದೊಂದಿಗೆ ತೆಗೆದುಕೊಂಡ ಸೆಲ್ಫಿಯನ್ನು ಸೋಷಿಯಲ್‌ ಮೀಡಿಯಾಗೆ ಅಪ್‌ಲೋಡ್‌ ಮಾಡಿದ್ದಾರೆ.

Comments are closed.