ಮನೋರಂಜನೆ

ಮಾತಿನಂತೆ ನಡೆದುಕೊಂಡ ಚಾಲೆಂಜಿಂಗ್ ಸ್ಟಾರ್ ದರ್ಶನ್

Pinterest LinkedIn Tumblr


ಚಿತ್ರರಂಗದಲ್ಲಿ ಬೇಡಿಕೆ ಕಡಿಮೆಯಾದ ಕಾರಣ ಹಿರಿಯ ನಟ ಅಶ್ವಥ್ ಪುತ್ರ ಶಂಕರ್ ಅಶ್ವಥ್ ಜೀವನ ನಡೆಸಲು ಕ್ಯಾಬ್ ಒಡಿಸುತ್ತಿದ್ದ ಸುದ್ದಿಯನ್ನು ನೀವು ಈ ಹಿಂದೆ ಓದಿರುತ್ತೀರಿ. ಅಲ್ಲದೇ ಒಬ್ಬ ದೊಡ್ಡ ನಟನ ಮಗನ ಪರಿಸ್ಥಿತಿ ನೋಡಿ ಎಲ್ಲರೂ ಬೇಸರಗೊಂಡಿದ್ದರು. ಇದೀಗ ಅವರ ಮೊಗದಲ್ಲಿ ಮಂದಹಾಸ ಮೂಡಿದೆ. ಅದಕ್ಕೆ ಕಾರಣ ಚಾಲೆಂಜಿಂಗ್ ಸ್ಟಾರ್ ದರ್ಶನ್.

ಹೌದು!​​ ಕನ್ನಡದ ಸ್ಟಾರ್​ ನಟನಾದರೂ, ತಮ್ಮ ಸಹಕಾರ ಗುಣದಿಂದ ಕೋಟ್ಯಾಂತರ ಜನರ ಮನಸ್ಸು ಗೆದ್ದಿರೋ ಕಲಾವಿದ. ದರ್ಶನ್ ತನ್ನ ಅಭಿಮಾನಿಗಳ ಕಷ್ಟವನ್ನು ತಮ್ಮ ಕಷ್ಟವೆಂದು ಭಾವಿಸೋ ವ್ಯಕ್ತಿ. ಕಷ್ಟ ಅಂತಾ ಯಾರೇ ಬಂದ್ರೂ, ಅವರನ್ನು ಸಂತೈಸೋ ದೊಡ್ಡ ಗುಣ ಅವರದ್ದು. ಈ ಹಿಂದೆ ಶಂಕರ್ ಅಶ್ವಥ್ ಅವರ ಪರಿಸ್ಥಿತಿ ಕಂಡು ಮರುಕಪಟ್ಟಿದ ದರ್ಶನ್ ತಮ್ಮ ಸಿನಿಮಾದಲ್ಲಿ ಅವಕಾಶ ನೀಡುವುದಾಗಿ ಹೇಳಿದ್ದರು.

ಈಗ ತಮ್ಮ ಮಾತಿನಂತೆ ಅವರು ನಡೆದುಕೊಂಡಿದ್ದಾರೆ. ದರ್ಶನ್ ನಟಿಸುತ್ತಿರುವ “ಯಜಮಾನ’ ಚಿತ್ರದಲ್ಲಿ ಶಂಕರ್ ಅಶ್ವಥ್ ಅವರಿಗೆ ಅವಕಾಶ ನೀಡಿದ್ದಾರೆ. ಹಾಗೂ ಈ ಹಿಂದೆ ಬಿಗ್‍ಬಾಸ್ ವಿನ್ನರ್ ಪ್ರಥಮ್ ಕೂಡಾ ತಮ್ಮ ಮುಂಬರುವ ಚಿತ್ರದಲ್ಲಿ ಶಂಕರ್ ಅಶ್ವಥ್ ಅವರಿಗೆ ಅವಕಾಶ ನೀಡುವುದಾಗಿ ಹೇಳಿದ್ದರು.

ಇನ್ನು “ಯಜಮಾನ’ ಚಿತ್ರವನ್ನು ಬಿ.ಸುರೇಶ್‌ ಹಾಗೂ ಶೈಲಜಾ ನಾಗ್‌ ನಿರ್ಮಿಸುತ್ತಿದ್ದು, ಪಿ.ಕುಮಾರ್‌ ಈ ಸಿನಿಮಾದ ನಿರ್ದೇಶಕರು. ಚಿತ್ರದಲ್ಲಿ ದರ್ಶನ್‌ಗೆ ನಾಯಕಿಯಾಗಿ ರಶ್ಮಿಕಾ ಮಂದಣ್ಣ ನಟಿಸುತ್ತಿದ್ದಾರೆ. ಚಿತ್ರಕ್ಕೆ ಹರಿಕೃಷ್ಣ ಸಂಗೀತ,”ಬಹದ್ದೂರ್‌’ ಚೇತನ್‌ ಸಂಭಾಷಣೆ, ಶ್ರೀಶ ಕೂದುವಳ್ಳಿ ಛಾಯಾಗ್ರಹಣವಿದೆ. ಚಿತ್ರದಲ್ಲಿ ರವಿಶಂಕರ್‌, ದೇವರಾಜ್‌, ಧನಂಜಯ್‌ ಸೇರಿದಂತೆ ಅನೇಕರು ನಟಿಸುತ್ತಿದ್ದಾರೆ.

-ಉದಯವಾಣಿ

Comments are closed.