ರಾಷ್ಟ್ರೀಯ

ಉನ್ನಾವ್‌ ಗ್ಯಾಂಗ್‌ ರೇಪ್‌: ಅಪರಾಧಿಗೆ ಶಿಕ್ಷೆ ಖಚಿತ: ಸಿಎಂ ಯೋಗಿ

Pinterest LinkedIn Tumblr


ಲಕ್ನೋ: ಉನ್ನಾವ್‌ ಗ್ಯಾಂಗ್‌ ರೇಪ್‌ ಕೇಸ್‌ ಆರೋಪಿ ಎಷ್ಟೇ ಪ್ರಭಾವಶಾಲಿಯಾಗಿದ್ದರೂ ಆತನ ವಿರುದ್ದ ಕಾನೂನಿನ ಪ್ರಕಾರ ಕಠಿನ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಇಂದು ಶುಕ್ರವಾರ ಹೇಳಿದರು.

“ಉನ್ನಾವ್‌ ರೇಪ್‌ ಕೇಸ್‌ ಹಗರಣದ ತನಿಖೆಯನ್ನು ಸಿಬಿಐಗೆ ಒಪ್ಪಿಸಲಾಗಿದೆ. ಸಿಬಿಐ ಆರೋಪಿ ಶಾಸಕನನ್ನು ಬಂಧಿಸಿರಬಹುದು. ಆರೋಪಿ ಎಷ್ಟೇ ಪ್ರಭಾವಶಾಲಿಯಾಗಿದ್ದರೂ ನಮ್ಮ ಸರಕಾರ ಕಾನೂನಿನ ಪಾರಮ್ಯದೊಂದಿಗೆ ರಾಜಿ ಮಾಡಿಕೊಳ್ಳುವುದಿಲ್ಲ; ರೇಪ್‌ ಆರೋಪಿಗೆ ಕಾನೂನು ಪ್ರಕಾರ ಕಠಿನ ಶಿಕ್ಷೆಯಾಗುವುದು ಖಚಿತ’ ಎಂದು ಸಿಎಂ ಯೋಗಿ ಆದಿತ್ಯನಾಥ್‌ ಹೇಳಿದರು.

-ಉದಯವಾಣಿ

Comments are closed.