ಮನೋರಂಜನೆ

ಸಂದರ್ಶನ ಮಾಡುತ್ತಾ ಕೊಳಕ್ಕೆ ಬಿದ್ದ ವರದಿಗಾರ

Pinterest LinkedIn Tumblr


ಟೀವಿ ವರದಿಗಾರರು, ನಿರೂಪಕರು ಕಾರ್ಯಕ್ರಮ ನಡೆಯುವ ವೇಳೆ ಮಾಡಿಕೊಳ್ಳುವ ಎಡವಟ್ಟುಗಳು
ಒಂದೆರಡಲ್ಲ. ಕಾಮನ್‌ವೆಲ್ತ್‌ ಕ್ರೀಡೆ ವರದಿ ಮಾಡುತ್ತಿದ್ದ ಖ್ಯಾತ ಇಂಗ್ಲಿಷ್‌ ವಾಹಿನಿಯೊಂದರ ವರದಿಗಾರರೊಬ್ಬರ ಎಡವಟ್ಟು ಈಗ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

ವರದಿಗಾರ ಮೈಕ್‌ ಬುಶೆಲ್‌ ಕಾಮನ್‌ವೆಲ್ತ್‌ ಗೇಮ್ಸ್‌ನ ಈಜು ಚಾಂಪಿಯನ್‌ಗಳ ಸಂದರ್ಶನ ಮಾಡಲು ಈಜುಕೊಳದ ಬಳಿ ತೆರಳಿ, ತಾವೇ ಆಯ ತಪ್ಪಿ ಈಜುಕೊಳದೊಳಗೆ ಬಿದ್ದಿದ್ದಾರೆ. ಈಜುಕೊಳ ಹೆಚ್ಚೇನೂ
ಆಳವಿಲ್ಲದ ಕಾರಣ ಬಿದ್ದ ಕೂಡಲೇ ಮೇಲೆ ಎದ್ದಿದ್ದಾರೆ.

ತಾವು ಸಂಪೂರ್ಣ ಮುಳುಗಿದರೂ ಕೈಯಲ್ಲಿದ್ದಮೈಕನ್ನು ಕಾಪಾಡಲು ಪ್ರಯತ್ನಿಸಿದ್ದಾರೆ. ಈ ವೀಡಿಯೋ
ಈಗ ಭಾರೀ ವೈರಲ್‌ ಆಗಿದೆ.

-ಉದಯವಾಣಿ

Comments are closed.