ರಾಷ್ಟ್ರೀಯ

ಸುದ್ದಿಕೋಶ 360: ಎಲ್‌ಪಿಜಿ ಆಮದು ಭಾರತ 2ನೇ ದೊಡ್ಡ ಗ್ರಾಹಕ

Pinterest LinkedIn Tumblr


ಬಡವರ ಮನೆಗೆ ಸ್ವತ್ಛ ಇಂಧನ ಪೂರೈಸುವ ಮಹದೊದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿ ಆರಂಭಿಸಿದ ಉಜ್ವಲ ಯೋಜನೆಯ ಫ‌ಲವಾಗಿ, ಲಕ್ಷಾನುಲಕ್ಷ ಬಡವರ ಮನೆಗಳಿಗೆ ಎಲ್‌ಪಿಜಿ ಅಡುಗೆ ಅನಿಲದ ಸಂಪರ್ಕ ಸಿಗುವಂತಾಗಿದೆ. ಪರಿಣಾಮ, ಈಗ ಭಾರತ, ವಿಶ್ವದಲ್ಲೇ 2ನೇ ಅತ್ಯಂತ ದೊಡ್ಡ ಎಲ್‌ಪಿಜಿ ಗ್ರಾಹಕ ದೇಶವಾಗಿ ಹೊರಹೊಮ್ಮಿದೆ. ಮೊದಲ ಸ್ಥಾನದಲ್ಲಿ ಚೀನಾ ಇದ್ದರೆ, ಮೂರನೇ ಸ್ಥಾನದಲ್ಲಿ ಜಪಾನ್‌ ಇದೆ. 2022ರಲ್ಲಿ ಚೀನಾವನ್ನು ಭಾರತ ಹಿಂದಿಕ್ಕುವ ಸಾಧ್ಯತೆಯಿದೆ.

ಚೀನಾ ಹಿಂದಿಕ್ಕಲಿರುವ ಭಾರತ
2017ರ ಡಿಸೆಂಬರ್‌ ತಿಂಗಳೊಂದರಲ್ಲೇ, ಎಲ್‌ಪಿಜಿ ಆಮದು ವಿಚಾರದಲ್ಲಿ ಚೀನಾವನ್ನು ಭಾರತ ಹಿಂದಿಕ್ಕಿದೆ. ಆ ಮಾಸದಲ್ಲಿ ಚೀನಾ 2.3 ಮೆ. ಟನ್‌ ಆಮದು ಮಾಡಿಕೊಂಡಿದ್ದರೆ, ಭಾರತ 2.4 ಮೆ. ಟನ್‌ ಆಮದು ಮಾಡಿಕೊಂಡಿದೆ. ಇದೇ ವೇಗದಲ್ಲೇ ಭಾರತ ಮುಂದುವರಿದರೆ, 2022ರ ಹೊತ್ತಿಗೆ ದೇಶದ ಆಮದು ಸರಾಸರಿ 27 ಮೆ.ಟನ್‌ ಆಗಲಿದ್ದು ಚೀನಾವನ್ನು ಹಿಂದಿಕ್ಕಬಹುದು ಎಂದು ತಜ್ಞರು ವಿಶ್ಲೇಷಿಸಿದ್ದಾರೆ.

ಉಜ್ವಲ ಹಾದಿ
*ಮೇ, 2016
ಉತ್ತರ ಪ್ರದೇಶದ ಬಲ್ಲಿಯಾ ಜಿಲ್ಲೆಯಲ್ಲಿ ಪ್ರಧಾನಿ ಮೋದಿಯಿಂದ ಉಜ್ವಲ ಯೋಜನೆ ಘೋಷಣೆ. 2019ರೊಳಗೆ 5 ಕೋಟಿ ಮನೆಗಳಿಗೆ ಎಲ್‌ಪಿಜಿ ಸಂಪರ್ಕ ಗುರಿ.
*ಡಿಸೆಂಬರ್‌, 2017
ಮೊದಲ ವರ್ಷ 1.5 ಕೋಟಿ ಮನೆಗಳಿಗೆ ಎಲ್‌ಪಿಜಿ ಸಂಪರ್ಕ ನೀಡುವ ಗುರಿ ದಾಟಿ, 2 ಕೋಟಿ ಮನೆಗಳಿಗೆ ಸಂಪರ್ಕ.
*ಫೆಬ್ರವರಿ, 2018
ಯೋಜನೆಯ ಗುರಿ 8 ಕೋಟಿಗೆ ಹೆಚ್ಚಳ. ಇದಕ್ಕಾಗಿ, ಸಾಮಾಜಿಕ- ಆರ್ಥಿಕ-ಜಾತಿ ಆಧಾರಿತ ಸಮೀಕ್ಷೆ.
*ಮಾರ್ಚ್‌, 2018
712 ಜಿಲ್ಲೆಗಳಲ್ಲಿ 3.57 ಕೋಟಿ ಮನೆಗಳಿಗೆ ಎಲ್‌ಪಿಜಿ ಸಂಪರ್ಕ.

-ಉದಯವಾಣಿ

Comments are closed.