ಮನೋರಂಜನೆ

ಕನ್ನಡಕ್ಕೆ ಬಂದ ಮತ್ತೊಬ್ಬ ಮಲಯಾಳಿ ಬೆಡಗಿ

Pinterest LinkedIn Tumblr


ವಿನಯ್‌ ರಾಜ್‌ಕುಮಾರ್‌ ಅಭಿನಯದ ಹೊಸ ಚಿತ್ರಕ್ಕೆ ಮಲೆಯಾಳಿ ಬೆಡಗಿ ಮಾನಸ ರಾಧಾಕೃಷ್ಣನ್‌ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಈ ಮೂಲಕ ಸ್ಯಾಂಡಲ್‌ವುಡ್‌ಗೆ ಮತ್ತೊಬ್ಬ ಮಲೆಯಾಳಿ ನಟಿ ಎಂಟ್ರಿ ಕೊಟ್ಟಂತಾಗಿದೆ.

ಸ್ಯಾಂಡಲ್‌ವುಡ್‌ನಲ್ಲಿ ಅನೇಕ ಮಲೆಯಾಳಿ ನಟಿಯರು ಈಗಾಗಲೇ ಜನಪ್ರಿಯ ನಟಿ ಎನಿಸಿಕೊಂಡಿದ್ದಾರೆ. ರಮ್ಯಾ ನಂಬೀಸನ್‌, ಭಾವನಾ ಮೆನನ್‌, ಭಾಮಾ, ನಿತ್ಯಾ ಮೆನನ್‌ ಹೀಗೆ. ಈಗ ಇನ್ನೊಬ್ಬ ಮಲೆಯಾಳಿ ಹುಡುಗಿ ಎಂಟ್ರಿ ಕೊಟ್ಟಿದ್ದಾರೆ. ಮಾನಸ ರಾಧಾಕೃಷ್ಣನ್‌ ವಿನಯ್‌ ರಾಜ್‌ಕುಮಾರ್‌ಗೆ ನಾಯಕಿಯಾಗಿ ನಟಿಸಲಿದ್ದಾರೆ. ಅಪ್ಪ ಅಮ್ಮ ಪ್ರೀತಿ ಎಂಬ ಚಿತ್ರದಲ್ಲಿ ವಿನಯ್‌ ನಟಿಸಲಿದ್ದು, ಸದ್ಯದಲ್ಲೆ ಚಿತ್ರ ಸೆಟ್ಟೇರಲಿದೆ. ಚಿತ್ರಕ್ಕೆ ಇದೇ ನನ್ನ ಪ್ರಪಂಚ ಎಂಬ ಟ್ಯಾಗ್‌ಲೈನ್‌ ಇದೆ.

ಶ್ರೀಧರ್‌ ಚೊಚ್ಚಲ ನಿರ್ದೇಶನದ ಚಿತ್ರದಲ್ಲಿ ವಿನಯ್‌ಗೆ ಅಪ್ಪ ಅಮ್ಮನಾಗಿ ತಾರಾ ಜೋಡಿಯಾದ ಶರತ್‌ ಮತ್ತು ರಾಧಿಕಾ ಶರತ್‌ ಕುಮಾರ್‌ ನಟಿಸಲಿದ್ದಾರೆ. ವಿನಯ್‌ ಈಗ ಅನಂತು ವರ್ಸಸ್‌ ನುಸ್ರತ್‌ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಇದಾದ ನಂತರ ಅಪ್ಪ ಅಮ್ಮ ಪ್ರೀತಿ ಚಿತ್ರ ಸೆಟ್ಟೇರಲಿದೆ.

Comments are closed.