ಮನೋರಂಜನೆ

ಈ ಬಾರಿಯ ಚುನಾವಣೆಯಲ್ಲಿ ಸುಮಲತಾ ಅಂಬರೀಷ್​ ಕಣಕ್ಕೆ !

Pinterest LinkedIn Tumblr

ಮಂಡ್ಯ: ಮಂಡ್ಯ ವಿಧಾನಸಭಾ ಕ್ಷೇತ್ರದಿಂದ ಈ ಬಾರಿ ಸುಮಲತಾ ಅಂಬರೀಷ್​ ಸ್ಪರ್ಧಿಸುವ ಸಾಧ್ಯತೆ ಹೆಚ್ಚಾಗಿದೆ. ಅಂಬರೀಷ್​ಗೆ ಅನಾರೋಗ್ಯವಿರುವ ಕಾರಣ ಸುಮಲತಾಗೆ ಟಿಕೆಟ್​ ನೀಡಲಾಗುವುದು. ಇದಕ್ಕೆ ಅಂಬರೀಷ್​ ಕೂಡ ಒಪ್ಪಿಗೆ ನೀಡಿದ್ದಾರೆ ಎನ್ನಲಾಗಿದೆ.

ಬುಧವಾರ ಕೆಪಿಸಿಸಿ ಕಚೇರಿಯಲ್ಲಿ ನಡೆದ ಟಿಕೆಟ್​ ಆಕಾಂಕ್ಷಿಗಳ ಪಟ್ಟಿ ತಯಾರಿಕೆ ಸಭೆಯಲ್ಲಿ ಸುಮಲತಾ ಹೆಸರು ಕೇಳಿಬಂದಿದೆ. ಮಂಡ್ಯದಿಂದ ಅಂಬರೀಷ್​​, ಸುಮಲತಾ, ಗಣಿಗ ರವಿಕುಮಾರ್​ ಹೆಸರನ್ನು ಹೈಕಮಾಂಡ್​ಗೆ ಶಿಫಾರಸು ಮಾಡಲಾಗುವುದು ಎಂದು ಅಂಬರೀಷ್​ ಆಪ್ತವಲಯದಿಂದ ಮಾಹಿತಿ ಸಿಕ್ಕಿದೆ.

Comments are closed.