ಕ್ರೀಡೆ

ಚೆಂಡು ವಿರೂಪಗೊಳಿಸಿದ ಪ್ರಕರಣದಲ್ಲಿ ಸಿಲುಕಿರುವ ಸ್ಮಿತ್​’ರನ್ನು ನೋಡಿದ ಕ್ರೀಡಾಭಿಮಾನಿಗಳು ಮಾಡಿದ್ದೇನು..? ಈ ವೀಡಿಯೊ ನೋಡಿ

Pinterest LinkedIn Tumblr

ನವದೆಹಲಿ: ಚೆಂಡು ವಿರೂಪಗೊಳಿಸಿದ ಪ್ರಕರಣದಲ್ಲಿ ಸಿಲುಕಿಕೊಂಡು ಒಂದು ವರ್ಷ ನಿಷೇಧಕ್ಕೆ ಒಳಗಾಗಿರುವ ಮಾಜಿ ನಾಯಕ ಸ್ಟೀವ್​ ಸ್ಮಿತ್​ ಮತ್ತೊಮ್ಮೆ ಭಾರಿ ಮುಖಭಂಗವನ್ನು ಅನುಭವಿಸಿದ್ದಾರೆ.

ಬುಧವಾರ ಜೋಹಾನ್ಸ್​ಬರ್ಗ್​ ವಿಮಾನ ನಿಲ್ದಾಣದಿಂದ ತಮ್ಮ ತವರಿಗೆ ತೆರಳುವಾಗ ವಿಮಾನ ನಿಲ್ದಾಣದಲ್ಲಿದ್ದ ಪ್ರಯಾಣಿಕರು ಸ್ಮಿತ್​ ಕಡೆ ನೋಡಿ ಚೀಟ್​(ಮೋಸ) ಎಂದು ಕೂಗಿದ್ದಾರೆ. ಈ ಸಂಬಂಧ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ.

ಕೇಪ್​ಟೌನ್ ಟೆಸ್ಟ್ ಪಂದ್ಯದ 3ನೇ ದಿನದಾಟದಲ್ಲಿ ಕ್ಯಾಮರೂನ್ ಬ್ಯಾಂಕ್ರಾಫ್ಟ್ ಸ್ಯಾಂಡ್​ಪೇಪರ್​ನಿಂದ ತಿಕ್ಕಿ ಚೆಂಡು ವಿರೂಪಗೊಳಿಸುವ ಯತ್ನಕ್ಕೆ ಸ್ಟೀವನ್ ಸ್ಮಿತ್, ಡೇವಿಡ್​ ವಾರ್ನರ್​ ಕುಮ್ಮಕ್ಕು ನೀಡಿದ್ದರು. ಈ ಪ್ರಕರಣದಲ್ಲಿ ಸ್ಮಿತ್​ ಮತ್ತು​ ವಾರ್ನರ್​ಗೆ 1 ವರ್ಷ ನಿಷೇಧ ಹೇರಲಾಗಿದ್ದು, ಕ್ಯಾಮರೂನ್​ ಬ್ಯಾಂಕ್ರಾಫ್ಟ್​ಗೆ 9 ತಿಂಗಳ ನಿಷೇಧ ಶಿಕ್ಷೆ ವಿಧಿಸಲಾಗಿದೆ.

Comments are closed.