ಮನೋರಂಜನೆ

ಸ್ಯಾಂಡಲ್‍ವುಡ್‌ನಲ್ಲಿ ‘ರೋಜಾ’ ಮಧು ಸೆಕೆಂಡ್ ಇನ್ನಿಂಗ್ಸ್

Pinterest LinkedIn Tumblr


‘ರೋಜಾ’ ಸಿನಿಮಾ ಎಂದರೆ ನೆನಪಾಗುವುದು ಸ್ನಿಗ್ಧ ಸೌಂದರ್ಯದ ಬೆಡಗಿ ಮಧು. ಮಣಿರತ್ನಂ ನಿರ್ದೇಶನದ ‘ರೋಜಾ’ ಸಿನಿಮಾ ಮೂಲಕ ದಿಢೀರ್ ಸ್ಟಾರ್ ಪಟ್ಟವೇರಿದ ತಾರೆ. ದಕ್ಷಿಣ ಭಾರತದ ಎಲ್ಲಾ ಭಾಷೆಗಳಲ್ಲೂ ಕಾಣಿಸಿಕೊಂಡಿರುವ ರೋಜಾ ಕನ್ನಡದ ‘ರನ್ನ’ ಚಿತ್ರದಲ್ಲಿ ಸುದೀಪ್‌ಗೆ ಸೋದರತ್ತೆಯಾಗಿ ಅಭಿನಯಿಸಿದ್ದಾರೆ.

ಇದೀಗ ಮತ್ತೆ ಸ್ಯಾಂಡಲ್‍ವುಡ್‌ಗೆ ಆಗಮಿಸಿರುವ ಮಧು ಸೆಕೆಂಡ್ ಇನ್ನಿಂಗ್ಸ್ ಆರಂಭಿಸಿದ್ದಾರೆ. ನಿಖಿಲ್ ಕುಮಾರ್ ನಾಯಕ ನಟನಾಗಿ ಅಭಿನಯಿಸುತ್ತಿರುವ ‘ಸೀತಾರಾಮ ಕಲ್ಯಾಣ’ ಚಿತ್ರದಲ್ಲಿ ಮಧು ಅಭಿನಯಿಸಲಿದ್ದಾರೆ.

ಈಗಾಗಲೆ ಸೀತಾರಾಮ ಕಲ್ಯಾಣ ಚಿತ್ರದ ಮೊದಲ ಹಂತದ ಚಿತ್ರೀಕರಣ ಮುಗಿದಿದೆ. ರಾಮ್ ಲಕ್ಷ್ಮಣ್ ಸಾಹಸ ಸಂಯೋಜನೆಯಲ್ಲಿ ಭರ್ಜರಿ ಫೈಟ್‌ಗಳನ್ನು ಚಿತ್ರೀಕರಿಸಿಕೊಂಡಿದೆ ತಂಡ. ಒಟ್ಟು 120 ದಿನಗಳ ಕಾಲ ಶೂಟಿಂಗ್ ನಡೆಯಲಿದ್ದು, ಬಹುಶಃ ಆಗಸ್ಟ್ ತಿಂಗಳಲ್ಲಿ ಚಿತ್ರ ತೆರೆಗೆ ಬರುವ ಸಾಧ್ಯತೆಗಳಿವೆ.

ಈ ಚಿತ್ರದಲ್ಲಿ ರಚಿತಾ ರಾಮ್ ನಾಯಕಿಯಾಗಿದ್ದು, ರವಿಶಂಕರ್, ಚಿಕ್ಕಣ್ಣ ಮುಂತಾದವರು ತಾರಾಬಳದಲ್ಲಿದ್ದಾರೆ. ರವಿ ಬಸ್ರೂರು ಸಂಗೀತ, ಸ್ವಾಮಿ ಜೆ ಅವರ ಛಾಯಾಗ್ರಹಣ ಚಿತ್ರಕ್ಕಿದೆ.

Comments are closed.