ಕರ್ನಾಟಕ

ಕೆಜೆಪಿ ಹೈಡ್ರಾಮಕ್ಕೆ ಸಂಸದೆ ಶೋಭಾ ಕರಂದ್ಲಾಜೆ ಕಾರಣ: ಪದ್ಮನಾಭ್ ಪ್ರಸನ್ನಕುಮಾರ

Pinterest LinkedIn Tumblr


ಬೆಳಗಾವಿ: ಕೆಜೆಪಿ ಹೈಡ್ರಾಮಕ್ಕೆ ಸಂಸದೆ ಶೋಭಾ ಕರಂದ್ಲಾಜೆ ಕಾರಣ ಎಂದು ಕೆಜೆಪಿ ಸಂಸ್ಥಾಪಕ ಪದ್ಮನಾಭ್ ಪ್ರಸನ್ನಕುಮಾರ ಆಪಾದಿಸಿದರು.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದಲ್ಲಿ ಕೆಜೆಪಿ – ಬಿಜೆಪಿ ಹೈಡ್ರಾಮಕ್ಕೆ ಶೋಭಾ ಕರಂದ್ಲಾಜೆಯಮ್ಮಾನೇ ಕಾರಣ. ಅವರಿಂದ ನನಗೆ ಅನ್ಯಾಯವಾಗಿದೆ ಇದನ್ನು ಜನಗಳ‌ ಮುಂದೆ ಹೇಳುತ್ತೇವೆ ಎಂದರು. ಯಡಿಯೂರಪ್ಪ ನವರ ಮೇಲೆ ವೈಯಕ್ತಿಕ ದ್ವೇಶವಿಲ್ಲ. ಶೋಭಾಯಮ್ಮನಿಂದ ನಮ್ಮ ಪಕ್ಷಕ್ಕೆ ನಷ್ಟವಾಗಿದೆ. ಶೋಭಾ ಕರಂದ್ಲಾಜೆ ಬಿಜೆಪಿಯಿಂದ ತೇರದಾಳ ಕ್ಷೇತ್ರದಲ್ಲಿ ಸ್ಪರ್ಧೆ ಮಾಡುತ್ತಾರೆ ಎಂದು ತಿಳಿದು ಬಂದಿದೆ. ಆದ್ದರಿಂದ ಆಕ್ಷೇತ್ರದಿಂದಲೇ ಸ್ವತಃ ನಾನೇ ಅಖಾಡಕ್ಕೆ ಇಳಿಯುತ್ತೇನೆ. ಶೋಭಾ ಕರಂದ್ಲಾಜೆ ನನಗೆ ಹಾಗೂ ಕೆಜೆಪಿ ಪಕ್ಷಕ್ಕೆ ಅನ್ಯಾಯ ಮಾಡಿರುವುದು ಎಳೆಎಳೆಯಾಗಿ ಬಿಚ್ಚಿ ಇಡುತ್ತೇನೆ ಎಂದರು.

ಕಾಂಗ್ರೆಸ್ ಹಾಗೂ ಬಿಜೆಪಿ ಆಕಾಂಕ್ಷಿ ಅಭ್ಯರ್ಥಿಗಳು ನಮ್ಮ ಸಂಪರ್ಕದಲ್ಲಿದ್ದಾರೆ. ಶಿಗ್ಗಾವಿಯ ಬಿಜೆಪಿ ಎಂಎಲ್ ಸಿ ಸೋಮಣ್ಣ ಬೇವಿನ ಮರದ, ಕಾಂಗ್ರೆಸ್ ನ ರಾಮಕೃಷ್ಣ ಸೇರಿದಂತೆ ಹಲವಾರು ಆಕಾಂಕ್ಷೆಗಳು ನಿಕಠ ಸಂಪರ್ಕ ಹೊಂದಿದ್ದಾರೆ ಎಂದರು.

Comments are closed.