ರಾಷ್ಟ್ರೀಯ

ಐಡಿಬಿಐ ಬ್ಯಾಂಕಿಗೆ 772 ಕೋಟಿ ರೂ. ಸಾಲ ವಂಚನೆ, ಶೇರು ಕುಸಿತ

Pinterest LinkedIn Tumblr


ಹೊಸದಿಲ್ಲಿ : ಆಂಧ್ರ ಪ್ರದೇಶ ಮತ್ತು ತೆಲಂಗಾಣದ ಐದು ಶಾಖೆಗಳ ಮೂಲಕ ನೀಡಲಾದ ಒಟ್ಟು 772 ಕೋಟಿ ರೂ. ಸಾಲವನ್ನು ತನಗೆ ವಂಚಿಸಲಾಗಿದೆ ಎಂದು ಐಡಿಬಿಐ ಬ್ಯಾಂಕ್‌ ಹೇಳಿದೆ. ಇದರ ಪರಿಣಾಮವಾಗಿ ಐಡಿಬಿಐ ಬ್ಯಾಂಕ್‌ ಶೇರಿನ ಧಾರಣೆ ಇಂದು ಶೇ.3.5ರಷ್ಟು ಕುಸಿದಿದೆ.

2009ರಿಂದ 2013ರ ವರೆಗಿನ ಅವಧಿಯಲ್ಲಿ ಅಸ್ತಿತ್ವದಲ್ಲೇ ಇಲ್ಲದ ಮೀನು ಕೃಷಿ ಹೊಂಡಗಳ ಖೋಟಾ ಲೀಸ್‌ ದಾಖಲೆ ಪತ್ರಗಳನ್ನು ಸಲ್ಲಿಸಿ 772 ಕೋಟಿ ರೂ. ಮೀನು ಕೃಷಿ ಸಾಲಗಳನ್ನು ಗ್ರಾಹಕರು ಪಡೆದಿದ್ದರು. ಈ ಸಾಲಕ್ಕೆ ನೀಡಲಾಗಿದ್ದ ಭದ್ರತೆಗಳ ಮೊತ್ತವನ್ನು ಅತ್ಯಧಿಕವಾಗಿ ಕಾಣಿಸಲಾಗಿತ್ತು. ಈ ಸಾಲಗಳು ಮರುಪಾವತಿಯಾಗದೆ ವಂಚಿಸಲ್ಪಟ್ಟಿವೆ ಎಂದು ಬ್ಯಾಂಕ್‌ ಹೇಳಿದೆ.

ಮುಂಬಯಿ ಶೇರು ಮಾರುಕಟ್ಟೆಯಲ್ಲಿ ಇಂದು ಐಡಿಬಿಐ ಶೇರುಗಳು ಶೇ.3.5ರಷ್ಟು ಕುಸಿದು 73.6 ರೂ.ಗೆ ಇಳಿದವು.

-ಉದಯವಾಣಿ

Comments are closed.