ಮನೋರಂಜನೆ

ಕಾಸ್ಟಿಂಗ್ ಕೌಚ್: ಮಂಡ್ಯ ರಮೇಶ್ ಬಿಚ್ಚಿಟ್ಟ ಸ್ಪೋಟಕ ಸತ್ಯ

Pinterest LinkedIn Tumblr


ಬಾಗಲಕೋಟೆ: ಚಿತ್ರರಂಗದಲ್ಲಿನ ಕಾಸ್ಟಿಂಗ್‌ ಕೌಚ್‌ ಬಗ್ಗೆ ಹಾಸ್ಯ ನಟ, ಹಿರಿಯ ರಂಗ ಭೂಮಿ ಕಲಾವಿದ ಮಂಡ್ಯ ರಮೇಶ್‌ ಸಹ ಸ್ಫೋಟಕ ವಿಷಯವನ್ನು ಹೊರಹಾಕಿದ್ದಾರೆ.

ಇಂದು ಏರ್ಪಡಿಸಿದ್ದ ಮಾಧ್ಯಮ ಸಂವಾದ ಕಾರ್ಯಕ್ರಮದಲ್ಲಿ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ಕನ್ನಡ ಚಿತ್ರರಂಗದಲ್ಲಿ ನಟಿಮಣಿಗಳಿಗೆ ಹೊಸ ಅವಕಾಶ ಸಿಗಬೇಕು ಅಂದರೆ, ಮಂಚ ಏರಬೇಕೆನ್ನುವ ವಾತಾವರಣ ಇದ್ದೇ ಇದೆ. ಅದು ಇಲ್ಲ ಎಂದು ಹೇಳುವ ಧೈರ್ಯ ತಮಗಿಲ್ಲವೆಂದು ಹೇಳಿದ್ದಾರೆ.

ಕನ್ನಡ ಚಿತ್ರ ರಂಗ, ತೆಲುಗು, ತಮಿಳು ಸೇರಿದಂತೆ ಭಾರತೀಯ ಚಿತ್ರರಂಗದ ಅನೇಕ ಕಡೆ ಹೊಸ ಅವಕಾಶಕ್ಕೆ ಮಂಚ ಏರ ಬೇಕೆನ್ನುವ ವಾತಾವರಣ ಇದೆ ಎಂದರು. ಇದು ಬಹಳ ನೋವಿನ ಸಂಗತಿ ಎಂದು ವಿಷಾಧ ವ್ಯಕ್ತಪಡಿಸಿದರು. ಇದನ್ನೆಲ್ಲ ಮೀರಿ ಹೋಗುವಂತಹ ಸಾಹಸವನ್ನು ಹೊಸ ತಲೆಮಾರಿನ ಯುವಕ-ಯುವತಿಯರು ಮಾಡಬೇಕಿದೆ. ಇಂತಹ ಘಟನೆಗಳು ಕಡಿಮೆಯಾದರೆ ಚಿತ್ರರಂಗ ಇನ್ನಷ್ಟು ಆರೋಗ್ಯಪೂರ್ಣವಾಗು ತ್ತದೆ ಎಂದು ಅಭಿಪ್ರಾಯಪಟ್ಟರು.

ಕಲಾವಿದರ ಬದುಕಿನ ಏರಿಳಿತಗಳ ಬಗ್ಗೆ ಮಾಧ್ಯಮ ಸಂವಾದದಲ್ಲಿ ಮಂಡ್ಯ ರಮೇಶ್‌ ತಮ್ಮ ಅಭಿಪ್ರಾಯ ಹಂಚಿಕೊಂಡರು.

Comments are closed.