ಮನೋರಂಜನೆ

ರಾತ್ರಿ ಬೆಳಗಾಗುವುದರೊಳಗೆ ಖ್ಯಾತಿ ಪಡೆದ ನಟಿ ಪ್ರಿಯಾ ಪ್ರಕಾಶ್ ವಾರಿಯರ್ ಬಗ್ಗೆಗಿನ ಸುದ್ದಿ ಎಲ್ಲವೂ ಸುಳ್ಳೇ…!.

Pinterest LinkedIn Tumblr

ಒಂದು ಹಾಡಿನ ಮೂಲಕ ರಾತ್ರಿ ಬೆಳಗಾಗುವುದರೊಳಗೆ ಖ್ಯಾತಿ ಪಡೆದಿದ್ದರು ನಟಿ ಪ್ರಿಯಾ ಪ್ರಕಾಶ್ ವಾರಿಯರ್. ಇತ್ತೀಚೆಗೆ ಅವರ ಹೆಸರು ದೊಡ್ಡ ಸ್ಟಾರ್ ನಟರ ಜತೆಗೆ ತಳುಕು ಹಾಕಿಕೊಳ್ಳುತ್ತಿದೆ. ಹಿಂದಿಯ ‘ಸಿಂಬಾ’ ಚಿತ್ರದಲ್ಲಿ ರಣವೀರ್ ಸಿಂಗ್​ಗೆ ಜತೆಯಾಗಿ ಪ್ರಿಯಾ ಕಾಣಿಸಿಕೊಳ್ಳಲಿದ್ದಾರೆ. ಈ ಮೂಲಕ ಅವರು ಬಾಲಿವುಡ್​ಗೆ ಎಂಟ್ರಿ ನೀಡುತ್ತಿದ್ದಾರೆ ಎಂಬ ಮಾತುಗಳು ಕೇಳಿ ಬಂದಿದ್ದವು. ಆದರೆ ಆ ಜಾಗಕ್ಕೆ ಸಾರಾ ಅಲಿ ಖಾನ್ ಆಯ್ಕೆಯಾದ ಮೇಲೆ ಪ್ರಿಯಾ ಬಗ್ಗೆ ವದಂತಿಗೆ ಪೂರ್ಣವಿರಾಮ ಬಿದ್ದಿತ್ತು, ಈಗ ತಮಿಳು ನಟ ಸೂರ್ಯ ನಟನೆಯ ಮುಂದಿನ ಚಿತ್ರಕ್ಕೆ ಪ್ರಿಯಾ ನಾಯಕಿ ಎಂಬ ಮಾತು ಕೇಳಿಬರುತ್ತಿದೆ. ಇದು ನಿಜವೇ? ‘ಖಂಡಿತ ಇಲ್ಲ. ಇದೆಲ್ಲ ಶುದ್ಧ ಸುಳ್ಳು’ ಎಂದು ನಿರ್ದೇಶಕ ಕೆ.ವಿ. ಆನಂದ್ ಸ್ಪಷ್ಟಪಡಿಸಿದ್ದಾರೆ. ಈ ಇನ್ನೂ ಹೆಸರಿಡದ ಈ ಚಿತ್ರಕ್ಕೆ ನಾಯಕಿಯ ಹುಡುಕಾಟದಲ್ಲಿದ್ದಾರೆ ಆನಂದ್. ಈ ಮಧ್ಯೆ ಪ್ರಿಯಾರನ್ನು ನಾಯಕಿ ಮಾಡಲು ಕಸರತ್ತು ನಡೆದಿದೆ ಎಂಬ ಮಾತುಗಳು ಕೇಳಿ ಬಂದಿದ್ದವು. ಈ ಕುರಿತು ಮಾಧ್ಯಮದವರಿಗೆ ಸ್ಪಷ್ಟನೆ ನೀಡಿರುವ ಅವರು, ‘ನಾನು ಪ್ರಿಯಾರನ್ನು ಭೇಟಿ ಮಾಡಿಯೇ ಇಲ್ಲ. ಅವರನ್ನು ಈ ಚಿತ್ರಕ್ಕೆ ಆಯ್ಕೆ ಮಾಡುವ ಯಾವುದೇ ಯೋಚನೆ ಇಲ್ಲ. ಅನುಭವಿ ಕಲಾವಿದೆಯೇ ಈ ಚಿತ್ರದಲ್ಲಿ ಇರುತ್ತಾರೆ’ ಎಂದಿದ್ದಾರೆ ಅವರು.

‘ಒರು ಆಡಾರ್ ಲವ್’ ಚಿತ್ರದ ಮೂಲಕ ಪ್ರಿಯಾ ಖ್ಯಾತಿ ಪಡೆದುಕೊಂಡಿದ್ದರು. ಜತೆಗೆ ಸಾಮಾಜಿಕ ಜಾಲತಾಣಗಳಲ್ಲಿ ಹೊಸ ಟ್ರೆಂಡ್ ಸೃಷ್ಟಿ ಮಾಡಿದ್ದರು.

Comments are closed.