ರಾಷ್ಟ್ರೀಯ

ಸರ್‌ ಎಂ ವಿಶ್ವೇಶ್ವರಯ್ಯ ಹೆಸರೇಳಲು ಪರದಾಡಿದ ರಾಹುಲ್‌ ಗಾಂಧಿ!

Pinterest LinkedIn Tumblr

ಚಾಮರಾಜನಗರ: ಎಐಸಿಸಿ ಅಧ್ಯಕ್ಷ ರಾಹುಲ್‌ಗಾಂಧಿ ರಾಜ್ಯಕ್ಕೆ ಭೇಟಿ ಕೊಟ್ಟಾಗಲೆಲ್ಲ ಒಂದಲ್ಲಾ ಒಂದು ಎಡವಟ್ಟು ಮಾಡಿಕೊಂಡು ಸಿಕ್ಕಿಬೀಳುತ್ತಾರೆ. ಕಳೆದ ಬಾರಿ ಬಸವಣ್ಣನ ವಚನ ಹೇಳಲು ಹೋಗಿ ನಗೆಪಾಟಲಿಗೆ ಗುರಿಯಾಗಿದ್ದ ರಾಹುಲ್‌ ಈ ಬಾರಿಯೂ ಮತ್ತದೇ ಎಡವಟ್ಟು ಮಾಡಿಕೊಂಡಿದ್ದಾರೆ.

ಚಾಮರಾಜನಗರದಲ್ಲಿ ಸರ್‌ ಎಂ ವಿಶ್ವೇಶ್ವರಯ್ಯ ಅವರ ಹೆಸರನ್ನು ಹೇಳಲು ತಡಬಡಾಯಿಸಿದ್ದಾರೆ. ತಮ್ಮ ಭಾಷಣ ಆರಂಭಿಸುತ್ತಿದ್ದಂತೆಯೇ ಟಿಪ್ಪು ಸುಲ್ತಾನ್‌ ಹೆಸರನ್ನು ಹೇಳಿದ ರಾಹುಲ್‌, ಬಳಿಕ ವಿಶ್ವೇಶ್ವರಯ್ಯ ಹೆಸರು ಹೇಳಲು ಪರದಾಡಿದ್ದಾರೆ. ವಿಶ್ವ ವಿಶ್ವ ರಯ್ಯ, ವಿಶ್ವರಯ್ಯಾ ಎಂದೆಲ್ಲ ಹೇಳಿ ತಡಬಡಾಯಿಸಿದ್ದಾರೆ.

ಕೊನೆಗೂ ಹೆಸರನ್ನು ಹೇಳಲು ಬಾರದೆ ತಮ್ಮ ಮಾತಿಗೆ ತಾವೇ ನಕ್ಕಿದ್ದಾರೆ. ಇನ್ನು ರಾಹುಲ್‌ ನಗುತ್ತಿದ್ದಂತೆ ಇಡೀ ಸಭೆ ಕೂಡ ನಗೆಗಡಲಲ್ಲಿ ತೇಲಿದೆ.

ಟಿಪ್ಪು ಸುಲ್ತಾನ್​ ಜೀ, ಕೃಷ್ಣ.. ಕೃಷ್ಣರ ರಾಜ ಒಡೆಯಾ ಜಿ, ವಿಶ್ವೇಶ್ವ್.. ವಿಶ್ವ.. ರಯಾ.. ವಿಶ್ವರಯ್ಯಾ.. ಕುವೆಂಪು ಜಿ ಎಂದು ಎಂದಿನಂತೆ ಬಸವಣ್ಣ, ಟಿಪ್ಪು, ಸರ್ ಎಂ.ವಿಶ್ವೇಶ್ವರಯ್ಯ ಮತ್ತು ನಾಲ್ವಡಿ ಕೃಷ್ಣರಾಜ ಒಡೆಯರ್‌ನ್ನು ರಾಹುಲ್‌ ಗಾಂಧಿ ತಮ್ಮ ಭಾಷಣದ ಆರಂಭದಲ್ಲಿ ಸ್ಮರಿಸಿದ್ದಾರೆ.

Comments are closed.