ಕ್ರೀಡೆ

ಕ್ರಿಕೆಟ್ ದೇವರು ಸಚಿನ್ ಕಾಲಿಗೆ ಬಿದ್ದ ವಿನೋದ್ ಕಾಂಬ್ಳಿ!

Pinterest LinkedIn Tumblr

ಮುಂಬೈ: ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ಕ್ರಿಕೆಟ್ ದಿಗ್ಗಜರಾದ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಮತ್ತು ವಿನೋದ್ ಕಾಂಬ್ಳಿ ಅವರ ಸ್ನೇಹವು ಶ್ರೇಷ್ಠವಾದದ್ದು. ಅಂತಹ ಈ ಇಬ್ಬರು ಚಿಗರಿ ದೋಸ್ತುಗಳು ಟೀಂ ಇಂಡಿಯಾದಲ್ಲಿ ಆಡಿದ್ದರು.

1988ರ ಹ್ಯಾರಿಸ್ ಶೀಲ್ಡ್ ಟೂರ್ನಮೆಂಟ್ ನ ಸೆಮಿಫೈನಲ್ ಪಂದ್ಯದಲ್ಲಿ ಈ ಜೋಡಿ 664 ರನ್ ಗಳ ಜತೆಯಾಟ ನೀಡಿದ್ದು ಇಂದಿಗೂ ಒಂದು ದಾಖಲೆ. ಇಬ್ಬರು ತಮ್ಮ ಸ್ನೇಹದ ಬಗ್ಗೆ ಸಾರ್ವಜನಿಕವಾಗಿ ಹೇಳಿಕೊಳ್ಳುತ್ತಿರುತ್ತಾರೆ.

ಮುಂಬೈ ಟಿ20 ಲೀಗ್ ನ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಇಬ್ಬರು ಕ್ರಿಕೆಟ್ ದಿಗ್ಗಜರು ಮುಖಾಮುಖಿಯಾಗಿದ್ದರು. ಈ ವೇಳೆ ಪ್ರಶಸ್ತಿ ನೀಡಲು ಬಂದಿದ್ದ ಸಚಿನ್ ಅವರ ಕಾಲನ್ನು ಮುಟ್ಟಿ ವಿನೋದ್ ಕಾಂಬ್ಳಿ ನಮಸ್ಕರಿಸಿದ್ದಾರೆ.

ಕಾಂಬ್ಳಿ ಕೋಚ್ ಆಗಿದ್ದ ಶಿವರಾಜ್ ಪಾರ್ಕ್ ಲಯನ್ಸ್ ತಂಡ ನೈಟ್ಸ್ ಮುಂಬೈ ವಿರುದ್ಧ ಮೂರು ರನ್ ಗಳಿಂದ ಸೋಲು ಕಂಡಿತ್ತು. ಪಂದ್ಯ ಮುಕ್ತಾಯ ಬಳಿಕ ಪ್ರಶಸ್ತಿ ಪ್ರದಾನ ಸಮಾರಂಭದ ವೇಳೆ ಕಾಂಬ್ಳಿ ಅವರು ಸಚಿನ್ ಬಳಿಕೆ ಹೋಗಿ ಅವರ ಕಾಲನ್ನು ಮುಟ್ಟಿ ನಮಸ್ಕರಿಸಿದ್ದಾರೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Comments are closed.