
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಡೆಸಿಕೊಡುತ್ತಿದ್ದ ಕನ್ನಡದ ಕೋಟ್ಯಧಿಪತಿ ಕಾರ್ಯಕ್ರಮ ಎಷ್ಟೆಲ್ಲಾ ಜನಪ್ರಿಯವಾಗಿತ್ತು ಎಂದು ಬಿಡಿಸಿ ಹೇಳಬೇಕಾಗಿಲ್ಲ. ಆ ಕಾರ್ಯಕ್ರಮದಿಂದ ಹಲವಾರು ಜನಸಾಮನ್ಯರು ಲಕ್ಷಾಧಿಪತಿಗಳಾದರು.
2012ರಲ್ಲಿ ಆರಂಭವಾಗಿದ್ದ ಈ ಶೋವನ್ನು ಪುನೀತ್ ನಿರೂಪಿಸುತ್ತಿದ್ದರು. ಹಿಂದಿಯಲ್ಲಿ ಅಮಿತಾಬ್ ಬಚ್ಚನ್ ನಡೆಸಿಕೊಡುತ್ತಿದ್ದ ‘ಕೌನ್ ಬನೇಗಾ ಕರೋಡ್‌ಪತಿ’ ಕಾರ್ಯಕ್ರಮದ ಕನ್ನಡ ಅವತರಣಿಕೆ ಇದಾಗಿತ್ತು. ಇದುವರೆಗೆ ಪುನೀತ್ ನಿರೂಪಣೆಯಲ್ಲಿ ಎರಡು ಸೀಸನ್‌ಗಳು ಮಾತ್ರ ಮೂಡಿಬಂದಿವೆ. ಇದೀಗ ಹೊಸ ಸೀಸನ್‌ಗೆ ರಾಕಿಂಗ್ ಸ್ಟಾರ್ ಯಶ್ ನಿರೂಪಣೆ ಮಾಡಲಿದ್ದಾರೆ.
ಜನಪ್ರಿಯ ಶೋ ಕನ್ನಡದ ಕೋಟ್ಯಧಿಪತಿ ಮತ್ತೆ ಸದ್ದಿಲ್ಲದೇ ಶುರುವಾಗುತ್ತಿದೆ. ಏಪ್ರಿಲ್‌ನಲ್ಲಿ ಅದು ಪ್ರಸಾರವಾಗಲಿದೆ. ಈ ಬಾರಿಯ ವಿಶೇಷತೆ ಅಂದರೆ, ಪುನೀತ್ ರಾಜ್‌ಕುಮಾರ್ ಬದಲಾಗಿ ಯಶ್ ಕಾರ್ಯಕ್ರಮವನ್ನು ನಡೆಸಿಕೊಡಲಿದ್ದಾರೆ. ಸದ್ದಿಲ್ಲದೇ ಶೋ ಸಿದ್ಧತೆ ಕೂಡ ನಡೆದಿದೆ.
ಸದ್ಯ ಕೆಜಿಎಫ್ ಸಿನಿಮಾದ ಶೂಟಿಂಗ್‌ನಲ್ಲಿ ಬಿಝಿ ಆಗಿರುವ ಯಶ್, ಈ ನಡುವೆಯೇ ಶೋ ಬಗ್ಗೆ ಹಲವು ಆಯಾಮಗಳನ್ನು ತಿಳಿದುಕೊಳ್ಳುತ್ತಿದ್ದಾರೆ. ಅಲ್ಲದೇ. ಹಾಟ್ ಸೀಟ್ ನಲ್ಲಿ ಕುಳಿತುಕೊಳ್ಳುವವರ ಹಿನ್ನೆಲೆಯನ್ನು ತಿಳಿದುಕೊಂಡು ಅದರಂತೆ ಕಾರ‍್ಯಕ್ರಮವನ್ನು ರೂಪಿಸಿಕೊಳ್ಳಲಿದ್ದಾರಂತೆ.
Comments are closed.