ಮನೋರಂಜನೆ

ಕಿಚ್ಚ ಸುದೀಪ್​ ಖರೀದಿಸಿರುವ ಹೊಸ ಜೀಪ್’ನ್ನು ಯಾರಿಗೆ ಗಿಫ್ಟ್ ಕೊಡುತ್ತಿದ್ದಾರೆ ಗೊತ್ತಾ..?

Pinterest LinkedIn Tumblr

ಬೆಂಗಳೂರು: ನಟ ಸುದೀಪ್ ಶೂಟಿಂಗ್ ನಡುವೆ ಎಷ್ಟೇ ಬಿಜಿಯಿದ್ದರೂ, ಕುಟುಂಬಕ್ಕೆ ಪ್ರಾಮುಖ್ಯತೆ ನೀಡುವುದನ್ನು ಮರೆಯುವುದಿಲ್ಲ. ಕೆಲಸದ ನಡುವೆಯೂ ಕುಟುಂಬದವರಿಗೋಸ್ಕರ ಒಂದಷ್ಟು ಸಮಯ ತೆಗೆದಿಡುತ್ತಾರೆ. ಅದೇ ರೀತಿ ಇತ್ತೀಚೆಗೆ ಸಹೋದರಿ ಸುಜಾತಾ ಸಂಜೀವ್ ಪುತ್ರಿ ಶ್ರೇಯಾ ಹುಟ್ಟುಹಬ್ಬಕ್ಕೆ ಸುದೀಪ್ ಜೀಪ್ ಕಂಪಾಸ್ ಎಸ್​ಯುುವಿ ಅನ್ನು ಉಡುಗೊರೆ ನೀಡಿದ್ದಾರೆ.

ಇತ್ತೀಚೆಗೆ ಯಶವಂತಪುರದಲ್ಲಿ ಕೆಎಚ್​ಟಿ ಜೀಪ್ ಡೀಲರ್​ಶಿಪ್ ಶೋ ರೂಂಗೆ ಭೇಟಿ ನೀಡಿದ ಅವರು, ಜೀಪ್ ಎಸ್​ಯುುವಿ ಖರೀದಿಸಿ ಉಡುಗೊರೆ ನೀಡಿದ್ದಾರೆ. ಈ ವೇಳೆ ಮಾತನಾಡಿದ ಸುದೀಪ್, ‘ಶ್ರೇಯಾ ಜೀಪ್ ಕಂಪಾಸ್ ಇಷ್ಟಪಟ್ಟಳು. ಹಾಗಾಗಿ ಅವಳ ಹುಟ್ಟುಹಬ್ಬಕ್ಕೆ ಅದನ್ನು ಉಡುಗೊರೆಯಾಗಿ ನೀಡಿದೆ. ಕಾರು ಖರೀದಿಸಿ ಸ್ವಲ್ಪ ದಿನ ಬಳಿಸಿದ ಮೇಲೆ ಬೇಸರ ಬಂದು ಬಿಡುತ್ತದೆ. ಆದರೆ, ನಾನು ಇದನ್ನು ಚಲಾಯಿಸಿದ್ದೇನೆ. ನನಗೂ ಇಷ್ಟವಾಗಿದೆ. ಈ ಎಸ್​ಯುುವಿ ಮೇಲೆ ಬೇಸರ ಮೂಡುವುದಿಲ್ಲ ಎಂಬುದು ನನ್ನ ಭಾವನೆ’ ಎಂದು ಅಭಿಪ್ರಾಯ ಹಂಚಿಕೊಂಡರು. ಇನ್ನು ಮಾವನಿಂದ ಉಡುಗೊರೆ ಪಡೆದ ಶ್ರೇಯಾ ಸಂತಸಪಟ್ಟರು.

Comments are closed.