ಮನೋರಂಜನೆ

ಬೆಡ್‌ರೂಮ್‌ ಗುಟ್ಟು ರಟ್ಟು ಮಾಡಿದ ಶಾಹಿದ್‌ ಕಪೂರ್‌ ಪತ್ನಿ ಮೀರಾ ! ಶಾಹಿದ್‌ಗೆ ಮುಜುಗರ !!!

Pinterest LinkedIn Tumblr

ನಟ ಶಾಹಿದ್‌ ಕಪೂರ್‌ ಅವರ ಪತ್ನಿ ಮೀರಾ ರಜಪೂತ್‌ ಟಾಕ್‌ ಶೋವೊಂದರಲ್ಲಿ ತಮ್ಮ ಬೆಡ್‌ರೂಮ್‌ ಸೀಕ್ರೆಟ್‌ ಶೇರ್‌ ಮಾಡಿ ಸುದ್ದಿಯಲ್ಲಿದ್ದಾರೆ. ನೇಹಾ ಧೂಪಿಯಾ ನಡೆಸಿಕೊಡುವ ಈ ಶೋದಲ್ಲಿ ಮೀರಾರಿಗೆ ಬೆಡ್‌ನಲ್ಲಿ ನಿಮ್ಮ ಫೇವರಿಟ್‌ ಪೊಸಿಷನ್‌ ಯಾವುದು ಎಂಬ ಪ್ರಶ್ನೆ ಕೇಳಲಾಗಿತ್ತು. ಆಗ ಅವರ ಪಕ್ಕದಲ್ಲಿದ್ದ ಶಾಹಿದ್‌ರಿಗೆ ಈ ಪ್ರಶ್ನೆಯಿಂದ ಸ್ವಲ್ಪ ಮುಜುಗರ ಮತ್ತು ಅನ್‌ಕಂಫರ್ಟ್‌ ಆದಂತೆ ಕಂಡು ಬಂತು. ಆದರೆ ಮೀರಾ ಮಾತ್ರ ಒಂಚೂರು ಸಂಕೋಚಪಡದೆ, ಶಾಹಿದ್‌ ಈ ವಿಷಯದಲ್ಲಿ ಕಂಟ್ರೋಲ್‌ ಫ್ರೀಕ್‌. ನಾನು ಏನು ಮಾಡಬೇಕೆಂದು ಅವರು ನನಗೆ ಯಾವಾಗಲೂ ಹೇಳುತ್ತಾರೆ ಎಂದು ಉತ್ತರ ಕೊಟ್ಟರು.

ಮೀರಾರ ಮಾತು ಇಷ್ಟಕ್ಕೆ ನಿಲ್ಲಲಿಲ್ಲ. ಅವರು ಮುಂದುವರಿದು, ಪದ್ಮಾವತ್‌ ಸಿನಿಮಾ ಶೂಟಿಂಗ್‌ ಸಮಯದಲ್ಲಿ ನಾನು ಕಳೆದ ರಾತ್ರಿಗಳು ಅತ್ಯಂತ ಕಷ್ಟದ್ದಾಗಿದ್ದವು. ಆಗ ಶಾಹಿದ್‌ ಬೆಳಗ್ಗೆ 8 ಗಂಟೆಗೆ ಮನೆಗೆ ಬಂದು ಮಧ್ಯಾಹ್ನ 2 ರವರೆಗೆ ಮಲಗುತ್ತಿದ್ದರು. ರಾತ್ರಿಯೆಲ್ಲಾ ಶೂಟಿಂಗ್‌ನಲ್ಲೇ ಕಳೆಯುತ್ತಿದ್ದರು. ಈ ಸಮಯದಲ್ಲಿ ನನ್ನ ಮಗಳು ಮಿಶಾಳೇ ನನಗೆ ಜೊತೆಯಾಗುತ್ತಿದ್ದಳು ಎಂದು ಮೀರಾ ಹೇಳಿದ್ದಾರೆ.

Comments are closed.