ಮನೋರಂಜನೆ

ಕಿರುತೆರೆ ನಟಿಯ ಟವಲ್ ಡ್ಯಾನ್ಸ್‌ನಲ್ಲಿ ಟ್ವಿಸ್ಟ್

Pinterest LinkedIn Tumblr


ಈಗ ಹಿಂದಿ ಟಿವಿ ಚಾನಲ್‌ನಲ್ಲಿ ಪ್ರಸಾರವಾಗುತ್ತಿರುವ ‘ಕುಂಡಲಿ ಭಾಗ್ಯ’ ಟಾಪ್ ಟಿಆರ್‌ಪಿ ಇರುವ ಸೀರಿಯಲ್. ಧಾರಾವಾಹಿ ಕ್ವೀನ್ ಏಕ್ತಾ ಕಪೂರ್ ನಿರ್ಮಾಣದಲ್ಲಿ ಬರುತ್ತಿರುವ ಈ ಸೀರಿಯಲ್ ತುಂಬಾ ಜನಪ್ರಿಯವಾಗಿದೆ.

ಇದಕ್ಕೂ ಮೊದಲು ಸೂಪರ್ ಪಾಪ್ಯುಲರ್ ಆದ ಕುಂಕುಮ್ ಭಾಗ್ಯ ಸೀರಿಯಲ್ ಕ್ಯಾನ್ಸೆಪ್ಟನ್ನು ಡೆವಲಪ್ ಮಾಡಿ ಕುಂಡಲಿ ಭಾಗ್ಯ ಧಾರಾವಾಹಿಯನ್ನು ತಂದಿರುವುದು. ಹಿಂದಿ ಸೀರಿಯಲ್‌ಗಳಲ್ಲಿ ಒಂದು ಹೊಸ ಐಡಿಯಾವನ್ನು ಹುಟ್ಟುಹಾಕಿದಂತಾಗಿದೆ. ಈಗ ಈ ಸೀರಿಯಲ್ ಬಗ್ಗೆ ಯಾಕೆ ಅಂತೀರಾ? ಈ ಧಾರಾವಾಹಿ ಮೂಲಕ ತುಂಬಾ ಜನಪ್ರಿಯರಾದ ಶ್ರದ್ಧಾ ಆರ್ಯ ಬಗ್ಗೆ ಹೇಳಲು.

ಕುಂಡಲಿ ಭಾಗ್ಯ ಸೀರಿಯಲ್ ಮೂಲಕ ಲೈಮ್‌ಲೈಟ್‌ಗೆ ಬಂದ ಶ್ರದ್ಧಾ ಆರ್ಯ ಇತ್ತೀಚೆಗೆ ಇನ್ಸ್‌ಟಾಗ್ರಾಮ್‌ನಲ್ಲಿ ಹಳೆ ವೀಡಿಯೋ ಒಂದನ್ನು ಹಂಚಿಕೊಂಡಿದ್ದಾರೆ. ಈ ವೀಡಿಯೋದಲ್ಲಿ ಶ್ರದ್ಧಾ ಜತೆ ಆಕೆ ಗೆಳತಿಯರು ಟವಲ್ ಸುತ್ತಿಕೊಂಡು ರಾಣಿ ಮುಖರ್ಜಿ, ಪ್ರೀತಿ ಜಿಂಟಾ ಹಾಡು ‘ಪಿಯಾ ಪಿಯಾ’ ಹಾಡಿಗೆ ಸ್ಟೆಪ್ ಹಾಕಿದ್ದಾರೆ. ಆರಂಭದಲ್ಲಿ ನೋಡಲು ಕ್ಯೂಟ್ ಆಗಿದೆ ಎನ್ನಿಸಿದರೂ ಎಲ್ಲವೂ ಅಂದುಕೊಂಡಂತೆ ನಡೆಯಲಿಲ್ಲ.

ಮೂವರೂ ತುಂಬಾ ಹತ್ತಿರ ಹತ್ತಿರವಾಗಿ ಕುಣಿಯುತ್ತಿದ್ದರು. ಮೂವರಲ್ಲೂ ಹೊಂದಾಣಿಕೆ ಕೊರತೆಯೋ ಏನೋ ಗೊತ್ತಿಲ್ಲ ಒಬ್ಬ ಡ್ಯಾನ್ಸರ್ ಜೋರಾಗಿ ಶ್ರದ್ಧಾ ಕಣ್ಣಿಗೆ ತಾಗಿಸಿದಳು. ನೋವಿನಿಂದ ಶ್ರದ್ಧಾ ಕೂಗುವುದು, ಆಕೆ ಗೆಳತಿಯರು ಸಹ ಶಾಕ್‍ಗೆ ಒಳಗಾಗುವುದನ್ನು ಈ ವಿಡಿಯೋದಲ್ಲಿ ನೋಡಬಹುದು. ಇದೀಗ ಈ ವೀಡಿಯೋ ಸಿಕ್ಕಾಪಟ್ಟೆ ಹರಿದಾಡುತ್ತಿದೆ.

Comments are closed.