ಮನೋರಂಜನೆ

ತೆರೆಗೆ ಬರಲು ಸಿದ್ಧವಾಗ್ತಿದೆ ಕಳ್ಬೆಟ್ಟದ ದರೋಡೆಕೋರರು!

Pinterest LinkedIn Tumblr


ಬೆಂಗಳೂರು: ನಿರ್ದೇಶಕ ದೀಪಕ್ ಮಧುವನಹಳ್ಳಿ ಇದೀಗ ಅನುಷ್ ಶೆಟ್ಟಿ ಬರೆದಿರುವ ಕಳ್ಬೆಟ್ಟದ ದರೋಡೆಕೋರರು ಕಾದಂಬರಿಯನ್ನು ಸಿನಿಮಾ ಮಾಡಲು ಮುಂದಾಗಿದ್ದಾರೆ. ಇದು ದೀಪಕ್ ಅವರ 2ನೇ ಚಿತ್ರವಾಗಿದ್ದು, ಈಗಾಗಲೇ ಭಾಗ್ಯರಾಜ್ ಸಿನಿಮಾವನ್ನು ನಿರ್ದೇಶಿಸಿದ್ದರು.

ಕಳ್ಬೆಟ್ಟದ ದರೋಡೆಕೋರರು ಕಾದಂಬರಿಗೆ ಸಿನಿಮಾ ರೂಪ ಕೊಟ್ಟಿರುವ ದೀಪಕ್ ಈಗಾಗಲೇ ಚಿತ್ರೀಕರಣ ಪೂರ್ಣಗೊಳಿಸಿದ್ದು, ಬಿಡುಗಡೆಗೆ ಸಿದ್ಧತೆ ನಡೆಸುತ್ತಿದ್ದಾರೆ. ರಾಮಾ ರಾಮಾ ರೇ ಖ್ಯಾತಿಯ ನಟರಾಜ್ ಈ ಚಿತ್ರದ ನಾಯಕ ನಟನಾಗಿದ್ದು, ಶ್ವೇತಾ ಪ್ರಸಾದ್ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ.

-ಉದಯವಾಣಿ

Comments are closed.