ಮನೋರಂಜನೆ

ಸನ್ನಿ ತರಹ ಚಹಾ ಮಾಡಲು ಪ್ರಯತ್ನಿಸದಿರಿ

Pinterest LinkedIn Tumblr


ಇತ್ತೀಚೆಗೆ ನಟ-ನಟಿಯರು ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್‌ ಆಗುವುದು ಸಾಮಾನ್ಯವಾಗಿದೆ. ಕೆಲವರು ಕಾರಣವಿಲ್ಲದೆ ಟ್ರೋಲ್‌ ಆದರೆ ಇನ್ನು ಕೆಲವರು ಟ್ರೋಲ್‌ಗಳಿಗೆ ತಾವೇ ದಾರಿ ಮಾಡಿಕೊಡುತ್ತಾರೆ. ಅದೇ ರೀತಿ ಬಾಲಿವುಡ್‌ನ ಹಾಟ್‌ ಬೆಡಗಿ ಸನ್ನಿ ಲಿಯೋನ್‌ ವಿಚಿತ್ರ ಫೋಟೋವೊಂದನ್ನು ಟ್ವಿಟರ್‌ನಲ್ಲಿ ಪೋಸ್ಟ್‌ ಮಾಡಿ, ಕಾಲೆಳೆಯುವವರಿಗೆ ಭರ್ಜರಿ ಅವಕಾಶ ನೀಡಿದ್ದಾರೆ.

ನೀವು ಎಂದಾದರು ಲೈಟರ್‌ನಲ್ಲಿ ಚಹಾ ಮಾಡಲು ಪ್ರಯತ್ನಿಸಿದ್ದೀರಾ? ಸಾಮಾನ್ಯಜ್ಞಾನ ಹೊಂದಿದವರು ಈ ತರಹದ ವಿಚಿತ್ರ ಪ್ರಯತ್ನಕ್ಕೆ ಕೈ ಹಾಕುವುದಿಲ್ಲ. ಒಂದು ವೇಳೆ ಲೈಟರ್‌ನಿಂದ ಚಹಾ ಮಾಡಲು ಪ್ರಯತ್ನಿಸಿದ್ದೇ ಆದಲ್ಲಿ, ಸಫಲತೆ ಎನ್ನುವುದು ದೂರದ ಮಾತಾಗುತ್ತದೆ. ಆದರೆ ಹಾಟ್‌ ಬೆಡಗಿ ಸನ್ನಿ ಲಿಯೋನ್‌ ಇಂಥದ್ದೊಂದು ವಿಚಿತ್ರ ಪ್ರಯತ್ನಕ್ಕೆ ಕೈಹಾಕಿ ನೆಟ್ಟಿಗರಿಂದ ನಗೆಪಾಟಲಿಗೆ ಗುರಿಯಾಗಿದ್ದಾರೆ.

ಹೌದು, ಸಿಗರೇಟ್‌ಗಾಗಿ ಬಳಸುವ ಲೈಟರ್‌ನ್ನು ಚಹಾ ಮಾಡಲು ಉಪಯೋಗಿಸಿದ್ದಾರೆ ಸನ್ನಿ. ಅಷ್ಟೇ ಅಲ್ಲದೆ ಚಹಾ ಮಾಡಿದ ಅನುಭವವನ್ನೂ ಬಿಚ್ಚಿಟ್ಟಿದ್ದಾರೆ. ‘ದಯವಿಟ್ಟು ಲೈಟರ್‌ ಸಹಾಯದಿಂದ ಚಹಾ ಮಾಡಲು ಪ್ರಯತ್ನಿಸಬೇಡಿ. ಅದು ಫಲ ನೀಡುವುದಿಲ್ಲ. ನಾನು ಪ್ರಯತ್ನಿಸಿದೆ ಆದರೆ ವಿಫಲಳಾದೆ’ ಎಂದು ಫೋಟೋ ಕ್ಯಾಪ್ಶನ್‌ ಬರೆದಿದ್ದಾರೆ.

ಸನ್ನಿಯ ಈ ವಿಫಲ ಪ್ರಯತ್ನ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ಚರ್ಚೆ ಆಗುತ್ತಿದೆ. ಬಗೆ ಬಗೆಯ ಕಮೆಂಟ್‌ಗಳು ಫೋಟೋಗೆ ಬಂದಿವೆ. ಸದ್ಯಕ್ಕೆ ಮೂರು ಮಕ್ಕಳ ತಾಯಿಯಾಗಿರುವ ಸನ್ನಿ, ಅದ್ಯಾಕೆ ಈ ತರಹ ಫೋಟೋ ಹಾಕಿದ್ರು ಎನ್ನುವುದೇ ದೊಡ್ಡ ಪ್ರಶ್ನೆ.

Comments are closed.